Wednesday 29 June 2011

ಆನ್ ಲೈನ್ ಮೂಲಕ ಉಚಿತವಾಗಿ ಕನ್ನಡ ಕಲಿಯಿರಿ

ಕನ್ನಡ ಕಲಿಯಬೇಕೆಂಬ ಉತ್ಸಾಹವುಳ್ಳ ಕನ್ನಡೇತರರಿಗೆ ಅಥವಾ ಮಕ್ಕಳಿಗೆ ಕನ್ನಡ ಕಲಿಸಬೇಕೆಂಬ ಆಸಕ್ತಿಯುಳ್ಳ ಹೊರನಾಡ ಕನ್ನಡಿಗರಿಗೆ ಇಲ್ಲೊಂದು ಅತ್ಯುತ್ತಮ ಅವಕಾಶ ಕೂಡಿಬಂದಿದೆ. ಮನೆ ಅಥವಾ ಕಚೇರಿಯಲ್ಲಿದ್ದಲ್ಲಿಂದಲೇ ಆನ್ ಲೈನ್ ಮೂಲಕ ಸರಳವಾಗಿ ಕನ್ನಡ ಕಲಿಯುವ ತರಗತಿಗಳು ಜೂನ್ 29 ರಿಂದ www.go4guru.com ಅಂತರ್ಜಾಲ ತಾಣದಲ್ಲಿ ಆರಂಭವಾಗುತ್ತಿವೆ.

ಇಲ್ಲಿ ಕನ್ನಡ ಕಲಿಯುವುದು ಸುಲಭ ಮಾತ್ರವಲ್ಲ ಉಚಿತ ಕೂಡ. ವಿಶ್ವದ ಯಾವುದೇ ಮೂಲೆಯಲ್ಲಿರುವ ಕನ್ನಡ ದಾಹಿಗಳು ಕನ್ನಡ ಭಾಷೆಯನ್ನು ಇಲ್ಲಿ ಕಲಿಯಬಹುದಾಗಿದೆ. go4guru ವೆಬ್ ಸೈಟಿಗೆ ಹೋಗಿ ನೊಂದಾಯಿಸಿಕೊಂಡು ಬೇಸಿಗೆ ತರಗತಿಗಳಲ್ಲಿ ಶ್ರದ್ಧಾವಂತ ವಿದ್ಯಾರ್ಥಿಯಾಗಿ ಭಾಗವಹಿಸಬಹುದು.

ಕನ್ನಡ ತರಗತಿಗಳಿಗೆ ಹೋಗಿ ಭಾಷೆ ಕಲಿಯುವುದು ಎಷ್ಟು ಕಷ್ಟಕರವೆಂದು ಎಲ್ಲರಿಗೂ ತಿಳಿದ ವಿಷಯ. ಇಲ್ಲಿ ಆ ಜಂಜಾಟವಿಲ್ಲ. ಮನೆಯಲ್ಲಿದ್ದಲ್ಲಿಂದಲೇ ಆಡಿಯೋ, ವಿಡಿಯೋ, ಚಾಟಿಂಗ್ ಮುಖಾಂತರ ಕನ್ನಡ ಕಲಿಯಬಹುದು. ಕನ್ನಡ ಕಲಿಸುವ ಶಿಕ್ಷಕರೊಡನೆ ಸಂವಾದ ಮಾಡುತ್ತ ಕನ್ನಡ ಕಲಿಯಬಹುದು.

ಕನ್ನಡ ತರಗತಿಗಳಲ್ಲದೆ ವಿದ್ಯಾರ್ಥಿಗಳಿಗಾಗಿ ಕರ್ನಾಟಕ, ಹಿಂದೂಸ್ತಾನಿ ಸಂಗೀತ, ಗಣಿತ, ಅಬ್ಯಾಕಸ್, ಚೆಸ್, ಫ್ರೆಂಚ್ ಮತ್ತಿತರ ಭಾಷೆಗಳನ್ನು ಕೂಡ ಕಲಿಯಬಹುದು. ಈ ತರಗತಿಗಳಲ್ಲಿ ಭಾಗವಹಿಸುವ ಮುಖಾಂತರ ಸಮಯವನ್ನೂ ಉಳಿಸಬಹುದು ಎಂಬುದು ಈ ಆನ್ ಲೈನ್ ತರಗತಿಗಳನ್ನು ಪ್ರಾರಂಭಿಸಿರುವ ಅಮೆರಿಕದಲ್ಲಿರುವ ಕಯಂಬು ರಾಮಲಿಂಗಂ ಅವರ ಅಭಿಪ್ರಾಯ.

ಹೆಚ್ಚಿನ ವಿವರಗಳಿಗಾಗಿ www.go4guru.com ತಾಣಕ್ಕೆ ಭೇಟಿ ನೀಡಿರಿ.

Thursday 23 June 2011

ಭೌತಶಾಸ್ತ್ರ ವಿದ್ಯಾರ್ಥಿಗಳಿಗೆ ಉಪಯುಕ್ತ ಜಾಲತಾಣ

ಭೌತಶಾಸ್ತ್ರದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಒಂದು ಉಪಯುಕ್ತ ಜಾಲತಾಣ www.iop.org. ವಿದ್ಯಾರ್ಥಿಗಳಿಗೆ, ಅಧ್ಯಾಪಕರುಗಳಿಗೆ ಮತ್ತು ಭೌತಶಾಸ್ತ್ರದಲ್ಲಿ ಆಸಕ್ತಿಯಿರುವ ಯಾರು ಬೇಕಾದರೂ ಈ ಜಾಲತಾಣದ ಪ್ರಯೋಜನ ಪಡೆದುಕೊಳ್ಳಬಹುದು. ಈ ಜಾಲತಾಣವು ಭೌತಶಾಸ್ತ್ರ ಸಂಸ್ಥೆಯ ಅಧಿಕೃತ ಜಾಲತಾಣ. ಆಸಕ್ತಿಯಿದ್ದಲ್ಲಿ ಈ ಸಂಸ್ಥೆಗೆ ಸದಸ್ಯರೂ ಆಗಬಹುದು. ಭೌತಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಮಾಹಿತಿ, ಲೇಖನಗಳ ಜೊತೆ ಹಲವು ವೀಡಿಯೋಗಳೂ ಇವೆ. ನಿಮ್ಮ ಶಾಲೆ ಯಾ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಯೋಗ ಪ್ರದರ್ಶನ ಮಾಡಬೇಕಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಹಲವು ಉದಾಹರಣೆಗಳು ಇಲ್ಲಿವೆ.