ದಾನ ಮಾಡಿ

ನಿಮ್ಮಲ್ಲಿ ನಿಮಗೆ ಉಪಯೋಗವಿಲ್ಲದ ಆದರೆ ಸಂಪೂರ್ಣ ಕೆಟ್ಟು ಹೋಗಿರದ ಹಲವಾರು ವಸ್ತುಗಳಿರಬಹುದು. ಅದು ಬೆಲೆಬಾಳುವ ಉಪಕರಣವಿರಬಹುದು, ಬಟ್ಟೆಬರೆಯಿರಬಹುದು, ಪುಸ್ತಕಗಳು, ಬ್ಯಾಗ್, ಷೂಗಳು ಅಥವಾ ಸೈಕಲ್, ಕಂಪ್ಯೂಟರ್ ಹೀಗೆ ಯಾವುದು ಬೇಕಿದ್ದರೂ ಆಗಿರಬಹುದು. ಅವುಗಳನ್ನು ಉಪಯೋಗ ಮಾಡುವಂತಹ ಬಡ ಮಕ್ಕಳಿಗೆ ದಾನ ಮಾಡುವ ಇಚ್ಛೆಯೂ ನಿಮಗಿರಬಹುದು. ಆದರೆ ದಾನ ಮಾಡುವುದು ಹೇಗೆ? ಅಗತ್ಯವಿರುವವರು ಎಲ್ಲಿದ್ದಾರೆ? ಅವರನ್ನು ಸಂಪರ್ಕಿಸುವುದು ಹೇಗೆ? ಎಂದೆಲ್ಲಾ ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು http://baalavana.blogspot.com/ ಜಾಲತಾಣದ ಮುಖಾಂತರ ದಾನ ಮಾಡಬಹುದು. ದಾನ ನೀಡುವವರನ್ನು ಮತ್ತು ದಾನ ಪಡೆಯುವವರನ್ನು ಈ ಜಾಲತಾಣ ಒಂದುಗೂಡಿಸುತ್ತದೆ. ಸಾಮಾನ್ಯವಾಗಿ ದಾನ ಪಡೆಯುವವರು ಅಂತರಜಾಲ ಬಳಸುವವರಾಗಿರುವುದಿಲ್ಲ. ಬಡ ಮಕ್ಕಳನ್ನು ಗುರುತಿಸಿ ಶಾಲೆಗಳು / ಎನ್‌ಜಿಓಗಳ ಮೂಲಕ ವಸ್ತುಗಳನ್ನು ವಿತರಣೆ ಮಾಡಲಾಗುತ್ತದೆ.

ಒಂದೊಳ್ಳೆ  ಮಹತ್ತರ ಕಾರ್ಯಕ್ರಮಕ್ಕೆ ಕೈಜೋಡಿಸುತ್ತೀರಲ್ಲವೇ?