Thursday, 16 August 2012

ಕಲಾಸಂತೆ ಜೊತೆಗೆ ವಿಧ್ಯಾರ್ಥಿ ಪ್ರತಿಭಾ ಪುರಸ್ಕಾರ-೨೦೧೨

ಕಲಾಸಂತೆ ಜೊತೆಗೆ ವಿಧ್ಯಾರ್ಥಿ ಪ್ರತಿಭಾ ಪುರಸ್ಕಾರ-೨೦೧೨ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

 
 ಕಾರ್ಯಕ್ರಮದ ಆಹ್ವಾನ ಪತ್ರಿಕೆ ಈಗಿತ್ತು!
ಕಾರ್ಯಕ್ರಮದ ಕರಪತ್ರ ಹಾಗೂ ಹಿಂಭಾಗದಲ್ಲಿ ಭಾರತದ ಸ್ವತಂತ್ರ್ಯ ದಿನಾಚರಣೆಯ ಬಗ್ಗೆ ಒಂದಿಷ್ಟು ಮಾಹಿತಿ.
 
ಕಲಾವಿದ ಮುನಿರಾಮು ವೇದಿಕೆಯಲ್ಲಿ ದಾನ್ಯಗಳಿಂದ ರಚಿಸಿದ ತ್ರಿವರ್ಣ ಭಾರತ ದೇಶದ ನಕ್ಷೆ ಹೇಗಿದೇ ನೋಡಿ! ಚೆನ್ನಾಗಿದ್ಯಾ.
ವಿಶೇಷ ಏನ್ ಗೊತ್ತಾ! ಅಂಧ ಕಲಾವಿದ ಮಿಮಿಕ್ರಿ ಕಲಾವಿದ ಅಂಧ ಶಿವಕುಮಾರ ಹಾಗೂ ಅವರ ಸ್ನೇಹಿತ ಸುರೇಶ್ ರವರಿಂದ ಕಾರ್ಯಕ್ರಮದ ಉದ್ಘಾಟನೆ ...

Monday, 6 February 2012

ಪಿಯುಸಿ ಸಿಇಟಿ ಆನ್‌ಲೈನ್ ಪ್ರಶ್ನೆ ಪತ್ರಿಕೆಗಳು ಲಭ್ಯ

ಪ್ರಸಕ್ತ ವರ್ಷ ಎರಡನೇ ಪಿಯುಸಿ ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪೂರ್ವತಯಾರಿಗೆ ಅನುಕೂಲವಾಗಲೆಂದು ಆನ್‌ಲೈನ್ ಪ್ರಶ್ನೆ ಪತ್ರಿಕೆಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ಪ್ರಶ್ನೆಗಳ ಜೊತೆಗೆ ಉತ್ತರಗಳೂ ದೊರೆಯಲಿವೆ.

ಪರೀಕ್ಷೆ ಸಮಯದಲ್ಲಿ ಸರಿಯಾದ ಪುಸ್ತಕಗಳು ದಕ್ಕದೆ ವಿದ್ಯಾರ್ಥಿಗಳು ದಿಕ್ಕೆಡದಿರಲೆಂದು ಈ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು, ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳಬೇಕೆಂದು ಶಿಕ್ಷಣ ಇಲಾಖೆ ತಿಳಿಸಿದೆ. ಪ್ರಶ್ನೆ ಪತ್ರಿಕೆಗಳು ಶಿಕ್ಷಣ ಇಲಾಖೆ ಮತ್ತು ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯ.

ಈ ಮಾದರಿ ಪ್ರಶ್ನೆಪತ್ರಿಕೆಗಳ ಜೊತೆಗೆ ಹಿಂದಿನ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳು ಉತ್ತರಗಳ ಸಮೇತ ಅಂತರ್ಜಾಲ ತಾಣದಲ್ಲಿ ಸಿಗಲಿವೆ ಎಂದು ಪದವಿಪೂರ್ಣ ಶಿಕ್ಷಣ ಇಲಾಖೆಯ ನಿರ್ದೇಶಕಿ ರಶ್ಮಿ ವಿ ಅವರು ತಿಳಿಸಿದ್ದಾರೆ. pue.kar.nic.inನಲ್ಲಿ ಪ್ರಶ್ನೆಗಳಿಗಾಗಿ ವಿದ್ಯಾರ್ಥಿಗಳು ಜಾಲಾಡಬಹುದು.

Monday, 23 January 2012

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವುದು ಹೇಗೆ?

ಮಕ್ಕಳಲ್ಲಿ ಜ್ಞಾಪಕ ಶಕ್ತಿಯ ಕೊರತೆ ಅವರ ಶಿಕ್ಷಣ ಮತ್ತು ವೈಯ್ಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಜ್ಞಾಪಕ ಶಕ್ತಿಯ ಕೊರತೆ ಮಕ್ಕಳ ಆತ್ಮವಿಶ್ವಾಸವನ್ನೂ ಕುಂಠಿತಗೊಳಿಸುತ್ತದೆ. ಆದರೆ ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಕೆಲವು ನೈಸರ್ಗಿಕ ವಿಧಾನವನ್ನು ಇಲ್ಲಿ ನೀಡಲಾಗಿದೆ. ಅವುಗಳನ್ನು ಮಕ್ಕಳಿಗೆ ನೀಡಿದರೆ ಜ್ಞಾಪಕ ಶಕ್ತಿ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ.

ಜ್ಞಾಪಕ ಶಕ್ತಿ ಹೆಚ್ಚಿಸುವ ವಿಧಾನ:
* ಮೆಂತ್ಯೆ ಸೊಪ್ಪು, ಮೂಲಂಗಿಯನ್ನು ಸಣ್ಣಗೆ ಹೆಚ್ಚಿಕೊಂಡು ಎರಡನ್ನೂ ಮಿಶ್ರಣ ಮಾಡಿ ಅದಕ್ಕೆ ಉಪ್ಪು, ಮೆಣಸು, ಜೀರಿಗೆಯ ಒಗ್ಗರಣೆ ನೀಡಿ ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದನ್ನು ಹಸಿಯಾಗೂ ಸೇವಿಸಬಹುದು, ಇಲ್ಲವೆಂದರೆ ಸ್ವಲ್ಪ ಬೇಯಿಸಿಯೂ ಸೇವಿಸಬಹುದು.
* ಒಂದು ಚೂರು ಹಸಿ ಶುಂಠಿ, ಸ್ವಲ್ಪ ಜೀರಿಗೆ ಮತ್ತು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗಿದು ತಿನ್ನುತ್ತಿದ್ದರೆ ನಾಲಿಗೆ ರುಚಿ ಹೆಚ್ಚುವುದರ ಜೊತೆ ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.
* ಸೇಬನ್ನು ಪ್ರತಿದಿನ ಊಟವಾದ ನಂತರ ನಿರಂತರವಾಗಿ ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
* ನಲ್ಲಿಕಾಯನ್ನು ತಿನ್ನುತ್ತಿದ್ದರೆ ಜ್ಞಾಪಕ ಶಕ್ತಿ ಕ್ರಮೇಣ ಹೆಚ್ಚುತ್ತದೆ.
* ಹಾಲಿಗೆ ಏಲಕ್ಕಿ ಪುಡಿ ಸೇರಿಸಿ ಕುದಿಸಿ ಜೇನು ತುಪ್ಪ ಬೆರೆಸಿ ಮಕ್ಕಳಿಗೆ ನೀಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.