Sunday 29 May 2011

ಭೋಧಿ ವೃಕ್ಷದಿಂದ ನುಡಿ ಮುತ್ತುಗಳು























ಮಕ್ಕಳಿಗೆ ಯಾವಾಗ ಪ್ರತ್ಯೇಕ ಕೋಣೆ ನೀಡುವಿರಿ?

"ಅಮ್ಮನ ಅಪ್ಪಿಕೊಂಡು ಮಲಗಿದರೆ ಮಾತ್ರ 9 ವರ್ಷದ ಮಗಳಿಗೆ ನಿದ್ದೆ ಬರೋದು, ಅವನಂತೂ ಹತ್ತು ವರ್ಷವಾದರೂ ಅಪ್ಪನೊಂದಿಗೆ ಮಲಗುತ್ತಾನೆ". ಮಕ್ಕಳಿಗೆ ಪ್ರತ್ಯೇಕವಾಗಿ ರೂಮ್ ನೀಡದೆ ಇದ್ದರೆ ಇಂತಹ ಮಾತುಗಳು ಕೇಳಿ ಬರುತ್ತಿರುತ್ತವೆ.

ಮಕ್ಕಳಿಗೆ ಪ್ರತ್ಯೇಕ ರೂಮಾ? ನಮ್ಮ ಜೊತೆಯಲ್ಲಿಯೇ ಇರಲಿ. ಸದಾ ನಮ್ಮ ಸಾಮೀಪ್ಯ ದೊರಕಲಿ. ಅಂತ ನೀವು ಬಯಸಬಹುದು. ಆದರೆ ನೀವು ನಿಧಾನವಾಗಿ ನಿಮ್ಮ ಮಕ್ಕಳ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದ್ದೀರಿ ಎಂಬ ಅರಿವಿರಲಿ.

ಮಕ್ಕಳ ಸ್ವಾತಂತ್ರ್ಯಕ್ಕೆ ಯಾಕೆ ಅಡ್ಡಿಬರಬೇಕು ಅಲ್ವೇ? ಒಂದಿಷ್ಟು ವಯಸ್ಸಾದಂತೆ ಅವರಿಗೊಂದು ಕೋಣೆ ಕೊಟ್ಟುಬಿಡಿ.

* ಸ್ವತಂತ್ರವಾಗಿ ಬದುಕಲು ಮಕ್ಕಳು ಸಜ್ಜಾಗಬೇಕೆಂದರೆ ಅವರಿಗೆ ಪ್ರತ್ಯೇಕವಾಗಿ ವಾಸಿಸಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಹಾಸ್ಟೇಲ್, ಮನೆಬಿಟ್ಟು ದೂರದಲ್ಲಿ ವಾಸಿಸುವ ಸಂದರ್ಭದಲ್ಲಿ ಅವರಿಗೆ ಕಷ್ಟವಾದೀತು.

* 5 ವರ್ಷ ಕಳೆದ ಮಕ್ಕಳು ಪ್ರತ್ಯೇಕ ಕೋಣೆಯಲ್ಲಿ ನಿದ್ದೆ ಮಾಡಲು ಶಕ್ತರು. ಇಷ್ಟು ವಯಸ್ಸು ಆದ ನಂತರ ಮಕ್ಕಳನ್ನು ಪ್ರತ್ಯೇಕ ಕೋಣೆಯಲ್ಲಿ ವಾಸಿಸಲು ಪೋಷಕರು ಪ್ರೋತ್ಸಾಹಿಸಬೇಕು.

* ಕೆಲವು ಮಕ್ಕಳು ಪ್ರತ್ಯೇಕವಾಗಿ ಮಲಗುತ್ತೇನೆ ಎಂಬ ಸೂಚನೆ ನೀಡುತ್ತಾರೆ. ಯಾಕೆ ಅಂತ ಕೇಳಿ. ಅವರೇನಾದರೂ ಕಾರಣ ನೀಡಬಹುದು. ಒಳ್ಳೆಯ ಪೋಷಕರಾಗಿ ಅವರ ಆ ಕೋರಿಕೆ ಈಡೇರಿಸಿಬಿಡಿ. 

* ನಿಮಗೆ ಇಬ್ಬರು ಮಕ್ಕಳಿದ್ದರೆ ಅವರನ್ನು ಒಂದೇ ಕೋಣೆಯಲ್ಲಿ ವಾಸಿಸಲು ಹೇಳಿರಿ.

ಮಕ್ಕಳು ಪ್ರತ್ಯೇಕ ಕೋಣೆ ಬಯಸಿದರೆ ಅದನ್ನು ನೀಡಿ. ಹಾಗೇ ಅಲ್ಲಿ ಅವರಿಗೆ ಬದುಕಿನ ಪಾಠಗಳನ್ನು ಹೇಳಿ ಕೊಡಬಹುದು. ಅವರ ಅಭಿರುಚಿಗೆ ತಕ್ಕಂತೆ ಗಿಟಾರ್ ನುಡಿಸಲು, ಚಿತ್ರ ಬಿಡಿಸಲು ಅವಕಾಶ ನೀಡಬಹುದು. ಕೋಣೆಯನ್ನು ನೀಟಾಗಿರುವುದು. ಕೋಣೆಯನ್ನು ಅಲಂಕರಿಸುವುದು. ಶಿಸ್ತು, ಸ್ವಚ್ಛತೆ ಇತ್ಯಾದಿಗಳನ್ನು ಹೇಳಿ ಕೊಡಬಹುದು. ಅವರಲ್ಲಿ ಅದು ತಮ್ಮ ಸ್ವಂತ ರೂಮ್ ಎಂಬ ಭಾವನೆ ಮೂಡುವಂತಾಗಲಿ.
http://thatskannada.oneindia.in

Friday 27 May 2011

ಮುಕ್ತ ಶಿಕ್ಷಣ ಸಂಪನ್ಮೂಲ

ಶಿಕ್ಷಣ ದಿನ ಕಳೆದಂತೆ ಅತಿ ದುಬಾರಿಯಾಗುತ್ತಿದೆ. ಪುಸ್ತಕಗಳ ಬೆಲೆ ಗಮನಿಸಿದ್ದೀರಾ? ಸರಕಾರಿ ಪುಸ್ತಕಗಳ ಹೊರತಾಗಿ ಇತರೆ ಖಾಸಗಿ ಪುಸ್ತಕಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉತ್ತಮ ಚಿತ್ರಗಳಿಂದ ತುಂಬಿದ ಪುಸ್ತಕಗಳ ಬೆಲೆ ಇನ್ನೂ ಅಧಿಕ. ಶಿಕ್ಷಣ ಜನಸಾಮಾನ್ಯರಿಗೆ ಸುಲಭವಾಗಿ ದೊರಕುವಂತಿರಬೇಕು ಮತ್ತು ಮುಕ್ತವಾಗಿರಬೇಕೆಂದು ಹೇಳುವವರು ನಮ್ಮ ದೇಶದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಇದ್ದಾರೆ. ಇವರೆಲ್ಲ ಸೇರಿಕೊಂಡು ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಸಂಪನ್ಮೂಲಗಳನ್ನು ಮುಕ್ತವಾಗಿ ದೊರೆಯುವಂತೆ ಮಾಡಲು ಒಂದು ಜಾಲತಾಣವನ್ನು ನಿರ್ಮಿಸಿದ್ದಾರೆ. ಅದರ ವಿಳಾಸ -www.oercommons.org. ಇತರೆ ಮುಕ್ತ ಸಂಪನ್ಮೂಲಗಳಿಗೆ ಇದರಲ್ಲಿ ಸಂಪರ್ಕಕೊಂಡಿಗಳೂ ಇವೆ.


ಸುಲಭದಲ್ಲಿ ವಿಜ್ಞಾನ ಆಟಿಕೆಗಳು

ವಿಜ್ಞಾನ ಶಿಕ್ಷಕರುಗಳಿಗೆ ಒಂದು ದೊಡ್ಡ ಸಮಸ್ಯೆಯೆಂದರೆ ವಿಜ್ಞಾನವನ್ನು ಕಲಿಸಲು ಬಳಸುವ ವೈಜ್ಞಾನಿಕ ಮಾದರಿಗಳ ಕೊರತೆ. ಇಡಿಯ ಕರ್ನಾಟಕ ರಾಜ್ಯಕ್ಕೆ ಒಂದು ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯ ಬೆಂಗಳೂರಿನಲ್ಲಿದೆ. ಪ್ರತಿಯೊಂದು ಶಾಲೆಯಿಂದ ಮಕ್ಕಳನ್ನು ಅಲ್ಲಿ ತನಕ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ವಿಜ್ಞಾನ ಕಲಿಸಲು ಸಹಾಯಕಾರಿಯಾಗುವ ಎಲ್ಲ ಮಾದರಿಗಳನ್ನು ಎಲ್ಲ ಶಾಲೆಗಳಲ್ಲಿ ಕೊಂಡುಕೊಳ್ಳಲೂ ಸಾಧ್ಯವಿಲ್ಲ. ಕೆಲವು ಮಾದರಿಗಳನ್ನು ಶಿಕ್ಷಕರೇ ತಮಗೆ ಲಭ್ಯವಿರುವ ವಸ್ತುಗಳಿಂದಲೇ ತಯಾರಿಸಬಹುದು. ಆದರೆ ಹೇಗೆ? ಅಂತಹ ಹಲವು ಮಾದರಿಗಳನ್ನು ಮತ್ತು ಆಟಿಕೆಗಳನ್ನು ತಯಾರಿಸಲು ವಿವರಣೆ ನೀಡುವ ಜಾಲತಾಣ www.arvindguptatoys.com. ಈ ಜಾಲತಾಣದಲ್ಲಿ ಹಲವು ಉಪಯುಕ್ತ ವಿ-ಪುಸ್ತಕಗಳು ಮತ್ತು ವೀಡಿಯೋಗಳು ಕೂಡ ಇವೆ. ಎಲ್ಲ ವಿಜ್ಞಾನ ಶಿಕ್ಷಕರುಗಳಿಗೂ ವಿದ್ಯಾರ್ಥಿಗಳಿಗೂ ತುಂಬ ಉಪಯುಕ್ತ ಜಾಲತಾಣ ಇದು.

get ready for school


ಪುಟಾಣಿಗಳಿಗೆ ವಿಜ್ಞಾನ

ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು ಹಲವು ಜಾಲತಾಣಗಳಿವೆ. ಅಂತಹ ಒಂದು ಜಾಲತಾಣ www.sciencekids.co.nz. ಈ ಜಾಲತಾಣದಲ್ಲಿ ವಿಜ್ಞಾನದ ಬೇರೆ ವಿಭಾಗಗಳ ಬಗ್ಗೆ ವಿಷಯಗಳಿವೆ. ವಿಜ್ಞಾನ, ಖಗೋಳಶಾಸ್ತ್ರ, ತಂತ್ರಜ್ಞಾನ, ಹೀಗೆ ಹಲವಾರು ವಿಷಯಗಳ ಮಾಹಿತಿ ಇಲ್ಲಿ ಲಭ್ಯ. ಕೆಲವು ವಿಶಿಷ್ಟ ಮಾಹಿತಿಗಳೂ ಇವೆ. ವಿಜ್ಞಾನ ಪಾಠಗಳು, ವೀಡಿಯೋಗಳು ಕೂಡ ಇವೆ. ವಿಜ್ಞಾನದಲ್ಲಿ ಮಕ್ಕಳು ಯಾವುದಾದರೂ ಪರಿಯೋಜನೆ ನಡೆಸಬೇಕೇ? ಅದಕ್ಕೂ ಸಹಾಯ ಇಲ್ಲಿ ಲಭ್ಯ. ಮಕ್ಕಳಿಗೆ ಆಟ ಎಂದರೆ ಇಷ್ಟ ತಾನೆ? ಇಲ್ಲಿ ಮಕ್ಕಳು ಆಟ ಆಡಿ ವಿಜ್ಞಾನವನ್ನು ಕಲಿಯಬಹುದು. ಅಂತಹ ಆಟಗಳು ಇಲ್ಲಿವೆ.

Thursday 19 May 2011

ಈ ಲೋಕೇಶನಿಗೆ ನ್ಯಾಯ ಕೊಡಿಸುವಿರಾ ಮಂತ್ರಿ ಮಹೋದಯರೇ?





ಇದು ಒಬ್ಬ ಲೋಕೇಶನ ಕಥೆಯಲ್ಲ. ಇಂಥ ಲಕ್ಷಾಂತರ ಲೋಕೇಶ್‌ಗಳು ಕರ್ನಾಟಕದಾದ್ಯಂತ ಇದ್ದಾರೆ. ಸದ್ಯಕ್ಕೆ ಕುರ್ಚಿ ಉಳಿಸಿಕೊಳ್ಳುವ ಕಾರ್ಯದಲ್ಲಿ ಬಿಜಿಯಾಗಿರುವ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಸರ್ಕಾರ ಕೆಡವಲು ತುದಿಗಾಲಲ್ಲಿ ನಿಂತಿರುವ ವಿರೋಧಪಕ್ಷದ ನಾಯಕರುಗಳು ಕನಿಷ್ಠ ಈ ಒಬ್ಬ ಲೋಕೇಶನಿಗಾದರೂ ನ್ಯಾಯ ದೊರಕಿಸಿಕೊಡುವರೆ? ಮಾಸ್ಟರ್ ಕಿಶನ್‌ಗಾಗಿ ನಿಯಮಗಳನ್ನು ಸಡಿಲಿಸಬಲ್ಲವರು, ಈ ಅಸಹಾಯಕ ಜನರಿಗೆ ಜಾತಿ ಸರ್ಟಿಫಿಕೇಟ್, ಇತ್ಯಾದಿಗಳಿಗಾಗಿ ಪೀಡಿಸುವುದನ್ನು ನಿಲ್ಲಿಸುತ್ತಾರಾ? ಇದ್ಯಾವುದೂ ಸಾಧ್ಯವಾಗದಿದ್ದರೆ ಬಡವರಿಗೆ ಈ ದೇಶದಲ್ಲಿ ಬದುಕುವ ಹಕ್ಕು ಇಲ್ಲ ಎಂದು ಘೋಷಿಸುವ ಮೂಲಕ ಕಠೋರವಾಸ್ತವವನ್ನು ಒಪ್ಪಿಕೊಳ್ಳಲು ಇವರು ಸಿದ್ಧರಿದ್ದಾರೆಯೇ?

ನಮ್ಮ ಮೀಡಿಯಾಗಳಲ್ಲಿ ನಿಜವಾಗಿಯೂ ಪ್ರಧಾನ ಆದ್ಯತೆಯ ವರದಿಯಾಗಬೇಕಿದ್ದ ಇದು ಯೂ ಟ್ಯೂಬ್‌ನಲ್ಲಿ ಕಾಣಿಸಿಕೊಂಡಿದೆ. ಈ ಮನಕಲಕುವ ಕಿರುಚಿತ್ರ ನಿರ್ಮಿಸಿದವರಿಗೆ ಒಂದು ಥ್ಯಾಂಕ್ಸ್. ಚಿತ್ರವೇ ಎಲ್ಲವನ್ನೂ ಹೇಳುತ್ತಿದೆ. ನಿಮ್ಮ ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.

ನಮ್ಮ ಇ ಮೇಲ್ ವಿಳಾಸ : sampadakeeya@gmail.com


Wednesday 18 May 2011

ಕಿರುಗತೆ

ಈ ಬಾರಿ ತನ್ನ ಮಾರ್ಮಿಕವಾದ ಬರಹಗಳಿಗೆ ಪ್ರಖ್ಯಾತನಾಗಿರುವ ಲೇಖಕ ಖಲೀಲ್ ಗಿಬ್ರಾನ್ ನ ಎರಡು ಕಿರುಗತೆಗಳನ್ನು ಇಲ್ಲಿ ಕೊಡುತ್ತಿದ್ದೇನೆ.

ಬದಲಾವಣೆ
ಅಫ್ಕಾರ್ ಎಂಬ ಪುರಾತನ ನಗರದಲ್ಲಿ ಇಬ್ಬರು ಘನ ವಿದ್ವಾಂಸರು ವಾಸಿಸುತ್ತಿದ್ದರು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ. ಅವರು ಪರಸ್ಪರರನ್ನು ದ್ವೇಷಿಸುತ್ತಾ, ಒಬ್ಬರು ಇನ್ನೊಬ್ಬರ ಪಾಂಡಿತ್ಯವನ್ನು ತೆಗಳುತ್ತಿದ್ದರು.
ಅವರಲ್ಲಿ ಒಬ್ಬ ವಿದ್ವಾಂಸ ದೇವರ ಅಸ್ತಿತ್ವವನ್ನು ನಿರಾಕರಿಸುತ್ತಿದ್ದ. ಇನ್ನೊಬ್ಬ ಆಸ್ತಿಕನಾಗಿದ್ದ.
ಒಂದು ದಿನ ಅವರು ಮಾರುಕಟ್ಟೆಯಲ್ಲಿ ಭೇಟಿಯಾದರು. ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ‘ದೇವರು ಅಸ್ತಿತ್ವದಲ್ಲಿದ್ದಾನೆ’. ‘ದೇವರು ಅಸ್ತಿತ್ವದಲ್ಲಿಲ್ಲ’ ಎಂದು ಘನಘೋರ ಚರ್ಚೆ ಮಾಡಿದರು.
ಗಂಟೆಗಳ ಕಾಲ ವಾದ ಮಾಡಿದ ಮೇಲೆ ಅವರು ಬೇರೆಯಾದರು.
ಆ ಸಂಜೆ ನಾಸ್ತಿಕನು ದೇವಾಲಯಕ್ಕೆ ಹೋಗಿ ಉದ್ದಂಡ ನಮಸ್ಕಾರ ಮಾಡಿ ತಾನು ಈ ತನಕ ಹಾದಿ ತಪ್ಪಿ ನಡೆಯುತ್ತಿದ್ದುದ್ದಕ್ಕಾಗಿ ಕ್ಷಮೆಗಾಗಿ ಪ್ರಾರ್ಥಿಸಿದ.
ಅದೇ ಹೊತ್ತಿನಲ್ಲಿ ದೇವರ ಅಸ್ತಿತ್ವವನ್ನು ಎತ್ತಿಹಿಡಿದಿದ್ದ ಆಸ್ತಿಕನು ತನ್ನ ಪವಿತ್ರ ಗ್ರಂಥಗಳನ್ನು ಸುಟ್ಟು ಹಾಕಿದ. ಯಾಕೆಂದರೆ ಅವನು ನಾಸ್ತಿಕನಾಗಿಬಿಟ್ಟಿದ್ದ! ಅವರು ಒಬ್ಬರನ್ನೊಬ್ಬರು ಬದಲಿಸಿದ್ದರು.

ಪ್ರತಿಮೆ

ಒಂದಾನೊಂದು ಕಾಲದಲ್ಲಿ ಬೆಟ್ಟಗಳ ನಡುವೆ ಒಬ್ಬ ಮನುಷ್ಯ ವಾಸಿಸುತ್ತಿದ್ದ. ಅವನ ಬಳಿ ಪ್ರಾಚೀನ ಶಿಲ್ಪಿಯೊಬ್ಬ ಕೆತ್ತಿದ್ದ ಸುಂದರವಾದ ಪ್ರತಿಮೆಯಿತ್ತು. ಅದು ಅವನ ಮನೆ ಬಾಗಿಲ ಮುಂದೆ ಮುಖ ಕೆಳಗಾಗಿ ಬಿದ್ದಿತ್ತು. ಅವನಿಗೆ ಅದರ ಪರಿವೆಯೇ ಇರಲಿಲ್ಲ.
ಒಂದು ದಿನ ನಗರದ ಒಬ್ಬ ಜ್ಞಾನಿ ಅವನ ಮುಂದೆ ಹಾದುಹೋಗುತ್ತಿದ್ದ. ಅವನ ಕಣ್ಣಿಗೆ ಈ ಪ್ರತಿಮೆ ಬಿತ್ತು. ಅವನು ಈ ಪ್ರತಿಮೆಯನ್ನು ನನಗೆ ಮಾರುತ್ತೀರಾ ಎಂದು ಮಾಲೀಕನನ್ನು ಕೇಳಿದ.
ಮಾಲೀಕ ಜೋರಾಗಿ ನಕ್ಕ, 'ಆ ಮುಸುಕಾದ ಕೊಳಕು ಕಲ್ಲಿನ ತುಂಡನ್ನು ಯಾರು ಕೊಳ್ಳುತ್ತಾರೆ, ಸ್ವಲ್ಪ ಹೇಳುತ್ತೀರಾ?' ಎಂದು ವ್ಯಂಗ್ಯವಾಗಿ ಕೇಳಿದ.
'ನಾನು ಈ ಬೆಳ್ಳಿಯ ನಾಣ್ಯವನ್ನು ಅದಕ್ಕೆ ಬದಲಾಗಿ ಕೊಡುತ್ತೇನೆ' ಎಂದು ನಗರದ ಮನುಷ್ಯ ಹೇಳಿದ.
ಪ್ರತಿಮೆಯ ಮಾಲೀಕನಿಗೆ ಆಶ್ಚರ್ಯ ಮತ್ತು ಸಂತೋಷ ಜತೆಗೇ ಆಯಿತು.
ಆ ಪ್ರತಿಮೆಯನ್ನು ಆನೆಯ ಮೇಲೆ ಹೇರಿಕೊಂಡು ನಗರಕ್ಕೆ ಸಾಗಿಸಲಾಯಿತು. ಕೆಲವು ತಿಂಗಳುಗಳ ನಂತರ ಬೆಟ್ಟದ ಮನುಷ್ಯ ನಗರಕ್ಕೆ ಹೋದ. ಅಲ್ಲಿನ ಬೀದಿಗಳಲ್ಲಿ ನಡೆಯುತ್ತಿದ್ದಾಗ ಒಂದು ಅಂಗಡಿಯ ಮುಂದೆ ಜನರ ಗುಂಪು ಸೇರಿದ್ದನ್ನು ನೋಡಿದ. ಒಬ್ಬ ಮನುಷ್ಯ ಜೋರಾಗಿ ಕೂಗುತ್ತಿದ್ದ, 'ಬನ್ನಿ, ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಅದ್ಭುತ ಪ್ರತಿಮೆಯನ್ನು ನೋಡಿ. ಅಸಾಮಾನ್ಯ ಕಲಾವಿದನ ಅತ್ಯಂತ ರಮಣೀಯ ಕೃತಿಯನ್ನು ನೋಡಲು ಕೇವಲ ಎರಡು ಬೆಳ್ಳಿಯ ನಾಣ್ಯಗಳು ಮಾತ್ರ'.
ಆಗ ಬೆಟ್ಟದ ಮನುಷ್ಯ ಎರಡು ಬೆಳ್ಳಿಯ ನಾಣ್ಯಗಳನ್ನು ಕೊಟ್ಟು ಅಂಗಡಿಯ ಒಳಗೆ ಹೋದಾಗ ಅವನು ಸ್ವತಃ ಒಂದು ಬೆಳ್ಳಿಯ ನಾಣ್ಯಕ್ಕಾಗಿ ಮಾರಿದ್ದ ಪ್ರತಿಮೆ ಅಲ್ಲಿತ್ತು.

ನಿಖಿಲ್ ಕೋಲ್ಪೆ

Monday 16 May 2011


ಮೈಸೂರು


ಮೈಸೂರು, ಉದ್ಯಾನ ನಗರಿ ಮತ್ತು ಅರಮನೆ ನಗರಿ ಎಂದೂ ಜನಜನಿತವಾಗಿರುವ ಮೈಸೂರು, ಕರ್ನಾಟಕ ರಾಜ್ಯದ ಎರಡನೇ ಅತಿದೊಡ್ಡ ಪಟ್ಟಣ. ಪೌರಾಣಿಕವಾಗಿ ಈ ನಗರದ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಪ್ರಖ್ಯಾತ ಚಾಮುಂಡಿ ಬೆಟ್ಟವು ನಗರದ ಆಗ್ನೇಯ ಭಾಗದಲ್ಲಿದೆ.

ಕ್ರಿಸ್ತಶಕ 1400ರಿಂದ, ಹಿಂದೂ ಆಳ್ವಿಕೆದಾರರಾದ ಒಡೆಯರ್ ಅರಸರ ಮುಖ್ಯ ಪಟ್ಟಣವಾಗಿತ್ತು ಮೈಸೂರು. 1956ರಲ್ಲಿ, ಈ ರಾಜಾಡಳಿತದ ರಾಜ್ಯವು ಭಾರತದ ಗಣರಾಜ್ಯವನ್ನು ಸೇರಿಕೊಳ್ಳುವ ಮೂಲಕ ಮೈಸೂರಿನಲ್ಲಿ ಒಡೆಯರ್ ಆಳ್ವಿಕೆಯು ಕೊನೆಗೊಂಡಿತು. 18ನೇಶತಮಾನದಲ್ಲಿ ಸ್ವಲ್ಪ ಕಾಲ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರು ಮೈಸೂರು ಸಾಮ್ರಾಜ್ಯವನ್ನು ಆಳಿದ್ದರು. ಅವರ ಕಾಲದಲ್ಲಿ ಶ್ರೀರಂಗಪಟ್ಟಣವು ರಾಜಧಾನಿಯಾಗಿತ್ತು.

ಆದರೆ, ಟಿಪ್ಪು ಸುಲ್ತಾನನನ್ನು ಸೋಲಿಸಿದ ಬಳಿಕ ಬ್ರಿಟಿಷರು, ಮೈಸೂರನ್ನು ಮರಳಿ ಒಡೆಯರ್ ಅವರಿಗೆ ಒಪ್ಪಿಸಿಬಿಟ್ಟರು. ಕೋಟೆಯ ಮಿತಿಗೆ ಸೀಮಿತವಾಗಿದ್ದ ಮೈಸೂರು ಪಟ್ಟಣವು ಆಧುನಿಕ ನಗರ ಸಂಸ್ಕೃತಿಗೆ ಬದಲಾಗಲು ಆರಂಭವಾಗಿದ್ದು 3ನೇ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ. ಅದ್ಭುತ ಯೋಜನೆಗಳ ಮೂಲಕ ಮೈಸೂರನ್ನು ಅಭಿವೃದ್ಧಿಗೊಳಿಸಿದ್ದು ನಾಲ್ಮಡಿ ಕೃಷ್ಣರಾಜ ಒಡೆಯರ್. ವಿಸ್ತಾರವಾದ ರಸ್ತೆಗಳು, ಸುಂದರ ಕಟ್ಟಡಗಳು ಮತ್ತು ಆಕರ್ಷಕ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಿ ಅವರು ಮೈಸೂರಿಗೆ ಪ್ರಸಿದ್ಧಿ ತಂದುಕೊಟ್ಟರು.

ಮೈಸೂರು ಎಂಬುದು “ಮಹಿಷಾಸುರ” ಎಂಬ ಅಸುರನ ಹೆಸರಿನಿಂದ ಮೂಲವಾಗಿ ಬಂದಿದೆ. ಇದನ್ನು ಹಿಂದೆ “ಮಹಿಷಾಸುರನ ಊರು” ಎಂದೂ ಕರೆಯಲಾಗುತ್ತಿತ್ತು. ದೇವೀ ಭಾಗವತದಲ್ಲಿ ಬರುವ ಪೌರಾಣಿಕ ಕಥನಕ್ಕೆ ಮೈಸೂರು ಸಂಬಂಧ ಹೊಂದಿದೆ. ದೇವಿ ಪುರಾಣದಲ್ಲಿ ಇರುವ ಕಥೆಯ ಪ್ರಕಾರ, ರಾಕ್ಷಸ ದೊರೆ, ಕೋಣನ ತಲೆಯುಳ್ಳ ಮಹಿಷಾಸುರ ಎಂಬಾತನು ಮೈಸೂರು ಪಟ್ಟಣವನ್ನು ಆಳುತ್ತಿದ್ದನು. ಈ ರಾಕ್ಷಸನ ಉಪಟಳ ತಾಳಲಾರದೆ ದೇವಾನುದೇವತೆಗಳು ತಮ್ಮನ್ನು ರಕ್ಷಿಸುವಂತೆ ಪಾರ್ವತೀ ದೇವಿಯ ಮೊರೆ ಹೋದರು. 
ಪಾರ್ವತಿಯು ಚಾಮುಂಡೇಶ್ವರಿಯಾಗಿ ಅವತಾರವೆತ್ತಿ ಮೈಸೂರು ಸಮೀಪದ ಚಾಮುಂಡಿ ಬೆಟ್ಟದ ತುತ್ತ ತುದಿಯಲ್ಲಿ ಅಸುರನನ್ನು ಸಂಹರಿಸಿದಳು. ಇದೇ ಕಾರಣದಿಂದಾಗಿ ಬೆಟ್ಟಕ್ಕೆ ಚಾಮುಂಡಿ ಬೆಟ್ಟವೆಂದೂ, ನಗರಕ್ಕೆ ಮೈಸೂರು ಎಂದೂ ಹೆಸರು ಬಂತು. ರಕ್ಕಸನನ್ನುಸಂಹರಿಸಿದ ಬಳಿಕ ಶ್ರೀದೇವಿಯು ಬೆಟ್ಟದ ತುದಿಯಲ್ಲಿ ನೆಲೆ ನಿಂತಳು. ಅಂದಿನಿಂದ ಇಂದಿನವರೆಗೂ ದೇವಿಯನ್ನು ಅಲ್ಲಿ ಭಕ್ತಿ ಭಾವಗಳಿಂದ ಪೂಜಿಸಿಕೊಂಡು ಬರಲಾಗುತ್ತಿದೆ.

ಚಾಮುಂಡೇಶ್ವರಿಯು ಮಹಿಷಾಸುರನನ್ನು ವಧಿಸಿದ ಸತ್ಕಾರ್ಯದ ಸ್ಮರಣಾರ್ಥವಾಗಿ, ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ ಪ್ರತಿವರ್ಷ 10 ದಿನಗಳ ಪ್ರಖ್ಯಾತ ದಸರಾ ಉತ್ಸವವನ್ನು ಇಲ್ಲಿ ಆಚರಿಸಲಾಗುತ್ತದೆ. ಇದು ಕರ್ನಾಟಕದ ನಾಡಹಬ್ಬವೆಂದೂ ಗುರುತಿಸಲ್ಪಟ್ಟಿದೆ.

ಮೈಸೂರು ಮಸಾಲೆ ದೋಸೆ ಮತ್ತು ಮೈಸೂರು ಪಾಕ್ ಮುಂತಾದ ಜನಪ್ರಿಯ ತಿಂಡಿಗಳಿಗೆ ಮೈಸೂರು ಪ್ರಸಿದ್ಧವಾಗಿದೆ. ಚಿರೋಟಿ, ಒಬ್ಬಟ್ಟು ಅಥವಾ ಹೋಳಿಗೆ ಮತ್ತು ಶಾವಿಗೆ ಪಾಯಸ ಮುಂತಾದ ಸಿಹಿ ತಿಂಡಿಗೂ ಮೈಸೂರು ನಿವಾಸಿಗಳು ಹೆಸರುವಾಸಿಯಾಗಿದ್ದಾರೆ.

ಮೈಸೂರು ರೇಷ್ಮೆ ಸೀರೆ ಎಂದೇ ಪ್ರಖ್ಯಾತವಾಗಿರುವ ಅತ್ಯಂತ ಜನಪ್ರಿಯ ರೇಷ್ಮೆ ಸೀರೆಯ ತವರೂರು ಕೂಡ ಮೈಸೂರು ಆಗಿದೆ. ಇದಲ್ಲದೆ, ಜನಪ್ರಿಯ ವರ್ಣಚಿತ್ರ ಕಲೆಯಾದ ಮೈಸೂರು ಚಿತ್ರಕಲೆಯೂ ವಿಶೇಷವಾಗಿ ಕಲಾ ವಲಯದಲ್ಲಿ ಪ್ರಸಿದ್ಧಿ ಪಡೆದಿದೆ.

ಪ್ರಖ್ಯಾತ ಕನ್ನಡ ಸಾಹಿತಿಗಳಾದ ಕುವೆಂಪು, ಗೋಪಾಲಕೃಷ್ಣ ಅಡಿಗ ಮತ್ತು ಯು.ಆರ್.ಅನಂತಮೂರ್ತಿ ಅವರೆಲ್ಲರಿಗೂ ಮೈಸೂರಿನ ಒಡನಾಟ ಸಾಕಷ್ಟಿದೆ. ಅವರು ತಮ್ಮ ಶಿಕ್ಷಣ ಪೂರೈಸಿದ್ದು ಮಾತ್ರವಲ್ಲದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬೋಧಕರಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಖ್ಯಾತ ಆಂಗ್ಲ ಕಾದಂಬರಿಕಾರ ಮತ್ತು ಮಾಲ್ಗುಡಿ ಡೇಸ್ ಖ್ಯಾತಿಯ ಆರ್.ಕೆ.ನಾರಾಯಣ್ ಹಾಗೂ ಅವರ ವ್ಯಂಗ್ಯಚಿತ್ರಕಾರ ಸಹೋದರ ಆರ್.ಕೆ.ಲಕ್ಷ್ಮಣ್ ಅವರು ತಮ್ಮ ಜೀವನದ ಹೆಚ್ಚಿನ ಭಾಗವನ್ನು ಮೈಸೂರಿನಲ್ಲಿಯೇ ಕಳೆದಿದ್ದರು. 
ಕೃತಿಸ್ವಾಮ್ಯ © ಚಂದಮಾಮ.

ಮುನ್ನೂರು ದಿನಗಳೂ ಉತ್ಸವಗಳೇ


 ಮುನ್ನೂರು ದಿನಗಳೂ ಉತ್ಸವಗಳೇ

ಶ್ರೀರಂಗದಲ್ಲಿ ಶ್ರೀರಂಗನಾಥಸಾ್ವಮಿ ದೇವಾಲಯದ ಪಾ್ರಕಾರದಲ್ಲಿ ಒಂದು ವರ್ಷದಲ್ಲಿ ಕನಿಷ್ಠ ಪಕ್ಷ ಮುನ್ನೂರು ದಿನಗಳಾದರೂ ಉತ್ಸವಗಳು ನಡೆಯುತ್ತಲೇ ಇರುತ್ತವೆ. ಹದಿಮೂರು ಅಂತಸ್ತು ಗಳುಳ್ಳ, ಸುಮಾರು 235 ಅಡಿಗಳ ಎತ್ತರದ ಪ್ರಧಾನ ಗಾಳಿಗೋಪುರವು ನಮ್ಮ ದೇಶದಲ್ಲೇ ತುಂಬಾ ಎತ್ತರವಾದ ದೇವಾಲಯ ಗೋಪುರ ವೆಂದು ಪ್ರಸಿದ್ಧಿ ಪಡೆದಿದೆ. ನಮ್ಮ ದೇಶದ ಐದು ಪ್ರಧಾನ ವೈಷ್ಣವ ಕ್ಷೀತ್ರಗಳಲ್ಲಿ ಶ್ರೀರಂಗವು ಮುಖ್ಯವಾದುದು. ತಿರುಚನಾಪಳ್ಳಿಗೇ ಹದಿನೈದು ಕಿ.ಮೀ. ದೂರದಲ್ಲಿರುವ ದ್ವೀಪವೇ ಶ್ರೀರಂಗ. ಈ ದೇವಾಲ ಯದ ಆವರಣದಲ್ಲಿ ಪ್ರಧಾನವಾದ ಶ್ರೀರಂಗನಾಥ ಸಾ್ವಮಿಯ ಆಲಯದ ಜೊತೆಗೇ ವಿಘ್ನೇಶ್ವರ, ವಿಷ್ಣು, ದುರ್ಗೇ, ರಾಮ ಲಕ್ಷಣ, ಕೃಷ್ಣ, ಆಂಜನೇಯ, ಧನ್ವಂತರಿಯೇ ಮೊದಲಾದ ದೇವತೆಗಳ ಆಲಯಗಳು ಕೂಡಾ ಇವೆ. ಆದ್ದರಿಂದ ಒಂದು ದೇವರ ನಂತರ ಮತೊ್ತಂದು ದೇವರಿಗೇ ಎಂದು ಉತ್ಸವಗಳು ನಡೆಯುತಾ್ತ ಇರುತ್ತವೆ. ಇಲ್ಲಿ ನಡೆಯುವ ಉತ್ಸವಗಳಲ್ಲಿ ಪ್ರಮುಖವಾದದು ಡಿಸೆಂಬರ್‌ ಮಾಹೆಯಲ್ಲಿ ಬರುವ ವೈಕುಂಠ ಏಕಾದಶಿ ಉತ್ಸವ.

ಶತಕೋಟಿಯನ್ನು ಮುಟ್ಟಿದ ಅಸಾ್ತ

 ಕ್ರಿ.ಶ. 2000ದ ಮೇ ತಿಂಗಳು 11ನೆಯ ತಾರೀಕು ಬೆಳಗಿನ ಜಾವ 5 ಗಂಟೆಗೇ ದೆಹಲಿಯಲ್ಲಿ ಒಂದು ಆಸ್ಪತ್ರೆಯಲ್ಲಿ ಹುಟ್ಟಿದ ಆಸಾ್ತ ಎಂಬ ಹೆಣ್ಣು ಮಗುವು ಚರಿತಾ್ರರ್ಹ ವೆನಿಸಿತು. ಅವಳ ಜನನದಿಂದಾಗಿ ಭಾರತದೇಶದ ಜನ ಸಂಖ್ಯೆಯು ಶತಕೋಟಿಯನ್ನು (1,000,000,000) ಮುಟ್ಟಿತು. 20ನೆಯ ಶತಮಾನದ ಆರಂಭದಲ್ಲಿ ನಮ್ಮ ದೇಶದ ಜನ ಸಂಖ್ಯೆಯು 230,000,000 ಇದ್ದಿತು.
ಶತಮಾನದ ಅಂತ್ಯದಲ್ಲಿ ವಿಶ್ವದ ಜನಸಂಖ್ಯೆಯ ಮೊತ್ತ 6,000,000,000. ವಿಶ್ವ ಆರೋಗ್ಯ ಸಂಸ್ಥೆಯ (ಏ) ಪ್ರಕಾರ 2045 ನೇ ವರ್ಷಕೇ್ಕ ಭಾರತ ದೇಶವು ಅತ್ಯಧಿಕ ಜನಸಂಖ್ಯೆಯುಳ್ಳ ದೇಶವಾಗಿರುತ್ತದೆ.

ತಾಜಮಹಲಿಗೇ 350 ವರ್ಷಗಳು


 ತಾಜಮಹಲಿಗೇ 350 ವರ್ಷಗಳು
ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿ ಪ್ರಸಿದ್ಧಿ  ಪಡೆದ ಆಗಾ್ರದ  ತಾಜಮಹಲ್‌ ಅನ್ನು 350 ವರ್ಷಗಳಿಗೇ ಮೊದಲು ಷಹಜಹಾನ್‌ ಚಕ್ರವರ್ತಿಯು ಕಟ್ಟಿಸಿದನು. ಇದರ ಎತ್ತರ  244 ಅಡಿಗಳು. ಅತ್ಯಂತ ಸಾಮ್ಯವಾಗಿ ನಿರ್ಮಿಸಲ್ಪಟ್ಟಿರುವುದರಿಂದ, ನೋಡುವವರಿಗೇ  ಕಟ್ಟಡವು ಅಷ್ಟು ಎತ್ತರವಾಗಿರುವಂತೆ ಕಾಣಿಸುವುದಿಲ್ಲ. ದೆಹಲಿಯಲ್ಲಿರುವ ಕುತುಬ್‌ಮಿನಾರ್‌ ಸ್ತೂಪವು ತಾಜಮಹಲಿಗಿಂತ ನಾಲ್ಕು ನೂರು ವರ್ಷಗಳಿಗೇ ಹಿಂದೆಯೇ ನಿರ್ಮಿಸಲ್ಪಟ್ಟಿತು. ಕುತುಬ್‌ಮಿನಾರ್‌ ಮಸೀದಿಯ ಗೋಪುರವು ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಗೋಪುರವಾಗಿ ಪ್ರಸಿದ್ಧಿ ಪಡೆದಿದೆ. ಆದರೆ ಅದು ತಾಜ್‌ಮಹಲ್‌ನ ಎತ್ತರಕ್ಕಿಂತ ನಾಲ್ಕು ಅಡಿ ಕಡಿಮೆಯಾಗಿದೆ. ತಾಜಮಹಲಿನ ನಾಲ್ಕೂ ಪಕ್ಕದ ಗೋಡೆಗಳ ಮೇಲೆ ಅರಬಿಕ್‌ ಲಿಪಿಯಲ್ಲಿ ಒಂದೇ ಅಳತೆಯಲ್ಲಿ ಖುರಾನಿನ ಸೂಕ್ತಿಗಳು ಬರೆಯಲ್ಪಟ್ಟಿವೆ. ಮುಮ್ತಾಜ್‌ಳ ಸಮಾಧಿಯ ಸುತ್ತಲೂ ಚಿನ್ನದಿಂದ ತಯಾರಿಸಲ್ಪಟ್ಟ ತೆರೆ ಇದ್ದಿತು. ಆದರೆ ನಂತರದ ಚಕ್ರವರ್ತಿಯು ಅದರ ಭದ್ರತೆಯನ್ನು ಶಂಕಿಸಿ, ಅಮೃತಶಿಲೆಯನ್ನು ಹೊಂದಿಸಿದನು. ಅವನ ಮಗನಾದ ಔರಂಗಜೇಬನು ಸೈನಿಕದಳದ ಪೋಷಣೆಗಾಗಿ ಆ ಚಿನ್ನದ ತೆರೆಯನ್ನು ಮಾರಿಬಿಟ್ಟನು. ಪ್ರಸ್ತುತ ಸಮಾಧಿಯ ಸುತ್ತಲೂ ಬಗೇ ಬಗೇಯ ಸುಂದರವಾದ ಎಲೆಗಳ ನಕಾಶೆಗಳಿರುವ ನಿರಾಡಂಬರವಾದ ತೆರೆಗಳು ಮಾತ್ರವಿವೆ.

 ಪ್ರಪಂಚದ ದಾಖಲೆ
ಭಾರತ ಸಾ್ವತಂತ್ರ್ಯ ಚಳುವಳಿಯಲ್ಲಿ ಮಹಾತಾ್ಮಗಾಂಧಿಯ ನಾಯಕತ್ವದಲ್ಲಿ ನಡೆದ ದಂಡಿಯಾತ್ರೆಯು ಬಹುಮುಖ್ಯವಾದುದು. ನಮ್ಮ ದೇಶದ ಚರಿತ್ರೆಯಲ್ಲಿ ಮಾತ್ರವಲ್ಲದೆ ಪ್ರಪಂಚದ ಚರಿತ್ರೆಯಲ್ಲೇ ಇದೊಂದು ಅಪೂರ್ವ ಘಟನೆ ಎನಿಸಿದೆ. ಇಪ್ಪತ್ತೈದು ದಿನಗಳ ವರೆಗೇ ನಡೆದ ಈ ಚಳುವಳಿಯು ಪ್ರಪಂಚದಲ್ಲೇ ನಡೆದ ಅತಿದೊಡ್ಡ ಅಸಹಕಾರ ಚಳುವಳಿಯಾಗಿ ಪ್ರಸಿದ್ಧಿ ಪಡೆದಿದೆ. 1930ರ ಮಾರ್ಚಿ 12ರಿಂದ ಎಪ್ರಿಲ್‌ 5ನೆಯ ತಾರೀಕಿನ ವರೆಗೂ ಗಾಂಧೀಜೀಯು 78 ಜನ ಅನುಯಾಯಿಗಳೊಡನೆ ಸಬರಮತಿ ಆಶ್ರಮದಿಂದ ದಂಡಿಯ ವರೆಗೂ ಎಂದರೆ 388 ಕಿ.ಮೀ. ದೂರವನ್ನು ಕಾಲುನಡಗೇಯಲ್ಲೇ ನಡೆದರು.




Sunday 15 May 2011

ಭಾರತೀಯ ಹಬ್ಬಗಳು

ದಸರಾ ಉತ್ಸವಗಳು

 ನಮ್ಮ ದೇಶದಲ್ಲಿ ಹೆಚ್ಚೂ ಕಡಿಮೆ ಎಲ್ಲ ಪ್ರಾಂತ್ಯಗಳಲ್ಲೂ ಆಟಪಾಠಗಳೊಡನೆ, ಅಲಂಕರಿಸಿ ಕೊಂಡು, ಆನಂದೋತ್ಸಾಹದಿಂದ ನಡೆಸುವ ಹಬ್ಬ ಎಂದರೆ ದಸರಾ. ಇದು ಆಶ್ವಯುಜ ಮಾಸದಲ್ಲಿ ಬರುತ್ತದೆ. ದುರ್ಗಾ ದೇವಿಯು ಲೋಕಕಂಟಕನಾದ ಮಹಿಷಾಸುರನನ್ನು ಸಂಹರಿಸಿದುದರ ನೆನಪಾಗಿ ದಸರಾ ಏರ್ಪಟ್ಟಿತ್ತೆಂದು ಹೇಳುತ್ತಾರೆ.

ಯಾವ ದೇವರ ಕೈಯಿಂದಲೂ ತನಗೇ ಮರಣವಿರಕೂಡದೆಂದು ಪರಮೇಶ್ವರನಿಂದ ವರವನ್ನು ಹೊಂದಿದ ಮಹಿಷಾಸುರನು, ಆ ವರದ ಗರ್ವದಿಂದ ಉಬ್ಬಿ ಬೀಗುತ್ತಾ ಎಲ್ಲರನ್ನೂ ಹಿಂಸಿಸಲಾರಂಭಿಸಿದನು. ಮಿತಿಮೀರಿದ ಅಹಂಕಾರದಿಂದ ಸಾಧುಗಳನ್ನೂ ಸಜ್ಜನರನ್ನೂ ಹಿಂಸಿಸಿದನು. ಆದುದರಿಂದ ದೇವತೆಗಳೆಲ್ಲರೂ ಹೋಗಿ ಪರಾಶಕ್ತಿಯನ್ನು ಬೇಡಿಕೊಂಡರು. ರಾಕ್ಷಸ ಸಂಹಾರಕ್ಕಾಗಿ ದುರ್ಗೇಯು ಅವತರಿಸಿದಳು.

ಅದ್ಭುತ ಶಕ್ತಿಯುತೆಯಾದ ದುರ್ಗಾ ದೇವಿಯು ದಿವ್ಯಾಸ್ತ್ರಗಳನ್ನು ಹೊಂದಿ, ಮಹಿಷಾಸುರನ ಮೇಲೆ ಬಿದ್ದು ಯುದ್ಧಮಾಡಿ ಅವನನ್ನು ಸಂಹಾರಮಾಡಿದಳು.

ಮಹಾಲಯ ಅಮಾವಾಸ್ಯೆಯಿಂದ ಆರಂಭವಾಗುವ ಈ ಹಬ್ಬವನ್ನು ಕೆಲವು ಪ್ರಾಂತ್ಯಗಳಲ್ಲಿ ಒಂಬತ್ತು ದಿನಗಳು ಆಚರಿಸುತ್ತಾರೆ. ಅವರು ಇದನ್ನು ದೇವಿ ನವರಾತ್ರಿ ಎಂದು ಹೇಳುತ್ತಾರೆ. ಕೆಲವು ಪ್ರಾಂತ್ಯಗಳಲ್ಲಿ ಇದನ್ನು ಹತ್ತು ದಿನಗಳ ಹಬ್ಬವಾಗಿ ಆಚರಿಸುತ್ತಾ ‘ದಸರಾ’ ಎಂದು ಕರೆಯುತ್ತಾರೆ.

ವಿನಾಯಕ ಚೌತಿ

 ಯಾವುದೇ ಒಂದು ಒಳ್ಳೆಯ ಕೆಲಸವನ್ನು ಪ್ರಾರಂಭಿಸುವಾಗ, ವಿಘ್ನಗಳು ಬರದಂತೆ ಕಾರ್ಯವು ಯಶಸ್ವಿಯಾಗಿ ನೆರವೇರಲು ವಿಘ್ನೇಶ್ವರನನ್ನು ಪೂಜಿಸಿ ಪ್ರಾರ್ಥಿಸುವುದು ಹಿಂದೂ ಜನರ ಪದ್ಧತಿ.

ಗಜಮುಖನಾದ, ಹೊಟ್ಟೆಯ ಗಣಪತಿಯ ಹುಟ್ಟಿದ ಹಬ್ಬವನ್ನು ಭಾದ್ರಪದ ಮಾಸದಲ್ಲಿ ಎಂದರೆ ಆಗಸ್ಟ್ ತಿಂಗಳಲ್ಲಿ ಆಚರಿಸುತ್ತಾರೆ. ಅವನು ಹುಟ್ಟಿದ ದಿನವನ್ನು ಗಣೇಶ ಚತುರ್ಥಿ ಅಥವಾ ವಿನಾಯಕ ಚೌತಿ ಎಂದು ಹೇಳುತ್ತೇವೆ. ವಿನಾಯಕ ಚೌತಿಯನ್ನು ದೇಶಾದ್ಯಂತಾ ಆಚರಿಸುತ್ತಾರೆ.

ಮಹಾರಾಷ್ಟ್ರದಲ್ಲಿ ಪ್ರತಿವರ್ಷವೂ ಭಾದ್ರಪದ ಶುಕ್ಲ ಚತುರ್ಥಿಯದಿನ ಗಣೇಶ ಮಹೋತ್ಸವವು ಆರಂಭವಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಈ ಉತ್ಸವವು ಹನ್ನೊಂದನೇ ದಿನ ಎಂದರೆ ಅನಂತ ಚತುರ್ದಶಿಯಂದು ಮುಕ್ತಾಯವಾಗುತ್ತದೆ.

ಮನೆಯಲ್ಲಿ ಚಿಕ್ಕ ಚಿಕ್ಕ ವಿಗ್ರಹಗಳ ರೂಪದಲ್ಲಿ ವಿಘ್ನೇಶ್ವರನನ್ನು ಪೂಜಿಸುತ್ತಾರೆ. ದೊಡ್ಡ ವಿಗ್ರಹಗಳು ಸುಮಾರು ಎಂಟರಿಂದ ಹತ್ತು ಮೀಟರ್‌ ಎತ್ತರದವರೆಗೂ ಇರುತ್ತವೆ. ಅನಂತ ಚತುರ್ದಶಿಯದಿನ ವಿನಾಯಕನ ವಿಸರ್ಜನೆಯನ್ನು ನಡೆಸುತ್ತಾರೆ. ಆ ದಿನ ಬಗೆಬಗೆಯ ಹೂಗಳಿಂದಲೂ, ಹಣ್ಣುಗಳಿಂದಲೂ, ನಾಣ್ಯಗಳಿಂದಲೂ ವಿಘ್ನೇಶ್ವರನ ವಿಗ್ರಹಗಳನ್ನು ಅಲಂಕರಿಸಿ, ದೀಪಾಲಂಕಾರ ಮಾಡಿದ ವಾಹನಗಳಲ್ಲಿ ಭಕ್ತಿಗೀತೆಗಳನ್ನು ಹಾಡುತ್ತಾ ಮಂಗಳವಾದ್ಯದೊಡನೆ ಉತ್ಸವವಾಗಿ ತೆಗೆದುಕೊಂಡು ಹೋಗಿ ನೀರಿನಲ್ಲಿ ವಿಸರ್ಜನೆ ಮಾಡುತ್ತಾರೆ.

ಹೈದರಾಬಾದು ನಗರದಲ್ಲಿ ಖೈರತಾಬಾದು ಪ್ರದೇಶದಲ್ಲಿ ಪ್ರತಿಷ್ಠಾಪಿಸಿರುವ 30 ಅಡಿಗಳ ಎತ್ತರದ ವಿಘ್ನೇಶ್ವರನ ವಿಗ್ರಹ ವಿನಾಯಕ ಚೌತಿಯ ದಿನ ಅಕ್ಕಿಹಿಟ್ಟು, ಬೆಲ್ಲ ಕೊಬ್ಬರಿ, ಎಳ್ಳುಗಳನ್ನು ಸೇರಿಸಿ ಸಿಹಿ ಕಡುಬನ್ನು ತಯಾರಿಸುತ್ತಾರೆ. ಈ ಕಡುಬುಗಳು ವಿನಾಯಕನಿಗೆ ತುಂಬಾ ಪ್ರಿಯವಾದುದೆಂದು ಹೇಳುತ್ತಾರೆ. ಆದುದರಿಂದಲೇ ವಿಘ್ನೇಶ್ವರನನ್ನು ‘ಮೋದಕ ಹಸ್ತ’ ನೆನ್ನುತ್ತಾರೆ. ಸಿಹಿ ಕಡುಬು, ಉಂಡೆಗಳು, ಗುಗ್ಗುರಿಗಳ ಜೊತೆಗೇ ಆಯಾ ಪ್ರಾಂತ್ಯಗಳಿಗೆ ಸೇರಿದ ಹಿಟ್ಟಿನ ತಿಂಡಿಗಳನ್ನು, ಹಣ್ಣುಗಳನ್ನು ನೈವೇದ್ಯವಾಗಿ ಇಡುತ್ತಾರೆ. ಉತ್ತರ ಭಾರತದ ರಾಜ್ಯಗಳಲ್ಲಿ ಬತ್ತಾಸು, ಲಡ್ಡು, ಚಕ್ಕಲಿ, ಕರ್ಜೀಕಾಯಿ, ಅತಿರಸ ಇತ್ಯಾದಿಗಳನ್ನು ಮಾಡುತ್ತಾರೆ.
 

ಕಾರ್ತೀಕ ದೀಪಂ!

ದಕ್ಷಿಣ ಭಾರತ ದೇಶದಲ್ಲಿ ಮುಖ್ಯವಾಗಿ ತಮಿಳು ನಾಡಿನಲ್ಲಿ ಆಚರಿಸುವ ದೀಪಗಳ ಹಬ್ಬ ಕಾರ್ತೀಕ ದೀಪಂ. ಕಾರ್ತೀಕ ಮಾಸದ ಪೌರ್ಣಮಿಯ ದಿನ ಈ ಹಬ್ಬ ಬರುತ್ತದೆ. ಈ ವರ್ಷ ನವಂಬರ್‌ 30ನೇ ದಿನದಂದೇ ಬರುತ್ತದೆ. ಈ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸುತ್ತಾರೆ.

ಪಂಚಭೂತಗಳಿಗೆಎಂದರೆ ಭೂಮಿ, ನೀರು, ಗಾಳಿ, ಅಗ್ನಿ, ಆಕಾಶದ ಅಧಿದೇವತೆಯಾದ ಪರಮೇಶ್ವರನು ಐದು ಸ್ಥಳಗಳಲ್ಲಿ ಐದು ಭೂತಗಳಾಗಿ ಪ್ರಕಟಗೊಂಡನೆಂದು ಪುರಾಣಗಳು ಹೇಳುತ್ತವೆ.

ಅರುಣಾಚಲದಲ್ಲಿ ಅಂದರೆ ತಿರುವಣ್ಣಾ ಮಲೈಯಲ್ಲಿ ಅಗ್ನಿಸ್ವರೂಪನಾಗಿ ಕಾಣಿಸಿಕೊಂಡನಂತೆ. ಪ್ರತಿವರ್ಷ ಕಾರ್ತೀಕ ಮಾಸದ ಭರಣಿ ನಕ್ಷತ್ರದ ದಿನ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ನಡೆಸಿ ಈ ಬೆಟ್ಟದ ಮೇಲೆ ದೀಪವನ್ನು ಹೊತ್ತಿಸಿ ವೈಭವದಿಂದ ಉತ್ಸವವನ್ನು ನಡೆಸುತ್ತಾರೆ.

ಮಳೆಗಾಲವು ಮುಗಿಯಿತೆಂದು ಪರಿಗಣಿಸುವುದಾಗಿ ಕೂಡಾ ಈ ಹಬ್ಬವು ಆಚರಿಸಲ್ಪಡುತ್ತದೆಂದು ಹೇಳುತ್ತಾರೆ. ಕಾರ್ತೀಕ ಮಾಸದ ಆರಂಭದಿಂದಲೇ ಹೆಂಗಸರು ಬೆಳಗಿನ ಜಾವದಲ್ಲೆದ್ದು ಸ್ನಾನಮಾಡಿ ನಡುಮನೆಯಲ್ಲಿ ತಂಬಿಟ್ಟಿನ ದೀಪಗಳನ್ನು ಉರಿಸುತ್ತಾರೆ. ಕಾರ್ತೀಕ ದೀಪದ ದಿನ ಪ್ರತಿಮನೆಯಲ್ಲೂ ವಿಶೇಷ ಪೂಜೆ ಮಾಡುತ್ತಾರೆ. ಮನೆಯನ್ನು ದೀಪಗಳಿಂದ ಅಲಂಕರಿಸುತ್ತಾರೆ. ದೇವಾಲಯಗಳಲ್ಲಿ ಗೋಪುರದ ಮೇಲೂ, ಕೊಳಗಳಲ್ಲೂ, ಬಾವಿಗಳಲ್ಲೂ ದೀಪಗಳನ್ನಿಡುವ ಆಚಾರವಿದೆ.

ಕೆಲವು ಕುಟುಂಬಗಳಲ್ಲಿ ಈ ದಿನ ಬೆಳಗಾದೊಡನೆಯೇ ಅಕ್ಕಿಹಿಟ್ಟು, ಬೆಲ್ಲ ಸೇರಿಸಿ ಮಾಡಿದ ತಂಬಿಟ್ಟಿನ ದೀಪಗಳಲ್ಲಿ ತುಪ್ಪವನ್ನು ಹಾಕಿ ನಡುಮನೆಯಲ್ಲಿ ಉರಿಸುತ್ತಾರೆ. ದೀಪ ಪೂಜೆಯನ್ನು ಮಾಡಿ ನಂತರ ದೇವರ ಪೂಜೆ ಮಾಡುತ್ತಾರೆ. ಮಕ್ಕಳು ದೀಪಾವಳಿಯಲ್ಲಿ ಉಳಿದ ಪಟಾಕಿ, ಬಾಣಬಿರುಸುಗಳನ್ನು ಈಗ ಹೊತ್ತಿಸುತ್ತಾರೆ. ದೀಪವು ಜ್ಞಾನದ ಸಂಕೇತ. ಜ್ಞಾನವನ್ನು ದೈವಸ್ವರೂಪವಾಗಿ ಭಾವಿಸುವ ಸಂಪ್ರದಾಯ ನಮ್ಮದು. ಅದಕ್ಕೊಂದು ಉತ್ತಮ ಉದಾಹರಣೆಯೇ ಈ ಕಾರ್ತೀಕ ದೀಪ...!

 ತಮಿಳುನಾಡು

  ತಮಿಳರಿಗೆ ಬಹಳ ಪ್ರಧಾನವಾದ ಹಬ್ಬ ಪೊಂಗಲ್‌. ಬೆಳೆಯು ಮನೆಗೆ ಸೇರಿದ ನಂತರ ರೈತರು ‘ತೈ’ ತಿಂಗಳಿನ ಮೊದಲನೇ ದಿನ ಅಂಗಳದಲ್ಲಿ ಪೊಂಗಲಿಟ್ಟು ಸೂರ್ಯ ಪರಮಾತ್ಮನಿಗೆ ಕೃತಜ್ಞತೆಗಳನ್ನು ತಿಳಿಸುವ ಹಬ್ಬ ಇದು. ಪೊಂಗಲ್‌ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸುತ್ತಾರೆ. ಇದನ್ನು ರೈತರ ಹಬ್ಬವೆಂದು ಕೂಡಾ ಹೇಳಬಹುದು.
ಮೊದಲನೆಯ ದಿನ ಭೋಗಿ ಹಬ್ಬ. ಮನೆಬಾಗಿಲುಗಳನ್ನು ಶುಭ್ರಗೊಳಿಸಿ, ಕೆಲಸಕ್ಕೆ ಬಾರದ ವಸ್ತುಗಳನ್ನು ಬೆಳಗಿನ ಜಾವದಲ್ಲಿ ಮನೆಯ ಮುಂದೆ ಭೋಗಿ ಉರಿಯಲ್ಲಿ ಉರಿಸುತ್ತಾರೆ. ಮನಸ್ಸಿನಲ್ಲಿ ಕಮಟುಗಟ್ಟಿದ ಮೌಢ್ಯ ಭಾವನೆಗಳನ್ನೂ ಆಚಾರ ಸಂಪ್ರದಾಯಗಳನ್ನೂ ಬಿಟ್ಟುಬಿಡುವುದಕ್ಕೆ ಸಂಕೇತವೆಂದೂ ಇದನ್ನು ಹೇಳಬಹುದು. ಆ ದಿನ ಅಭ್ಯಂಜನ ಸ್ನಾನ ಮಾಡಿ ಹಬ್ಬ ದೂಟ ಮಾಡುತ್ತಾರೆ.

ಮಾರನೆಯ ದಿನ ಪೊಂಗಲ್‌. ಅದೇ ಮಕರ ಸಂಕ್ರಾಂತಿ. ಹೊಸ ಬಟ್ಟೆಗಳನ್ನು ಹಾಕಿಕೊಂಡು ಹೊಸ ಮಡಕೆಯಲ್ಲಿ ಹೊಸ ಅಕ್ಕಿ, ಹೊಸ ಬೆಲ್ಲ ಹಾಕಿ ಹಾಲು ಬೆರೆಸಿ ಪೊಂಗಲ್‌ ಮಾಡುತ್ತಾರೆ. ಬೆಳೆಯನ್ನು ಕರುಣಿಸುವ ಸೂರ್ಯ ಪರಮಾತ್ಮನನ್ನು ಪ್ರಾರ್ಥಿಸುತ್ತಾರೆ. ಕೇಲವು ಗ್ರಾಮಗಳಲ್ಲಿ ಜನರೆಲ್ಲರೂ ಒಂದೇ ಸ್ಥಳದಲ್ಲಿ ಸೇರಿ ದೊಡ್ಡ ದೊಡ್ಡ ಮಡಕೆಗಳಲ್ಲಿ ಪೊಂಗಲು ಮಾಡುವ ಸಂಪ್ರದಾಯವೂ ಇದೆ.

ಪಟ್ಟಣ ಪ್ರದೇಶಗಳಲ್ಲೂ ಸಹಾ ಹೊಸ ಅಕ್ಕಿ, ಬೆಲ್ಲ, ಹಾಲು ಸೇರಿಸಿ ಸಕ್ಕರೆ ಪೊಂಗಲ್‌ ಮಾಡುತ್ತಾರೆ. ಮನೆಯನ್ನು ಶುಭ್ರಗೊಳಿಸಿ ಮನೆ ಬಾಗಿಲು, ಅಂಗಳಗಳಲ್ಲಿ ದೊಡ್ಡ ದೊಡ್ಡ ರಂಗೋಲಿಗಳನ್ನಿಡುತ್ತಾರೆ. ಬಾಗಿಲಿನಲ್ಲಿ ಮಾವಿನೆಲೆಯಿಂದ ತೋರಣಕಟ್ಟಿ ಅಲಂಕರಿಸುತ್ತಾರೆ. ಸೂರ್ಯನನ್ನು ಆರಾಧಿಸುತ್ತಾರೆ.