ಮುನ್ನೂರು ದಿನಗಳೂ ಉತ್ಸವಗಳೇ
ಶ್ರೀರಂಗದಲ್ಲಿ ಶ್ರೀರಂಗನಾಥಸಾ್ವಮಿ ದೇವಾಲಯದ ಪಾ್ರಕಾರದಲ್ಲಿ ಒಂದು ವರ್ಷದಲ್ಲಿ ಕನಿಷ್ಠ ಪಕ್ಷ ಮುನ್ನೂರು ದಿನಗಳಾದರೂ ಉತ್ಸವಗಳು ನಡೆಯುತ್ತಲೇ ಇರುತ್ತವೆ. ಹದಿಮೂರು ಅಂತಸ್ತು ಗಳುಳ್ಳ, ಸುಮಾರು 235 ಅಡಿಗಳ ಎತ್ತರದ ಪ್ರಧಾನ ಗಾಳಿಗೋಪುರವು ನಮ್ಮ ದೇಶದಲ್ಲೇ ತುಂಬಾ ಎತ್ತರವಾದ ದೇವಾಲಯ ಗೋಪುರ ವೆಂದು ಪ್ರಸಿದ್ಧಿ ಪಡೆದಿದೆ. ನಮ್ಮ ದೇಶದ ಐದು ಪ್ರಧಾನ ವೈಷ್ಣವ ಕ್ಷೀತ್ರಗಳಲ್ಲಿ ಶ್ರೀರಂಗವು ಮುಖ್ಯವಾದುದು. ತಿರುಚನಾಪಳ್ಳಿಗೇ ಹದಿನೈದು ಕಿ.ಮೀ. ದೂರದಲ್ಲಿರುವ ದ್ವೀಪವೇ ಶ್ರೀರಂಗ. ಈ ದೇವಾಲ ಯದ ಆವರಣದಲ್ಲಿ ಪ್ರಧಾನವಾದ ಶ್ರೀರಂಗನಾಥ ಸಾ್ವಮಿಯ ಆಲಯದ ಜೊತೆಗೇ ವಿಘ್ನೇಶ್ವರ, ವಿಷ್ಣು, ದುರ್ಗೇ, ರಾಮ ಲಕ್ಷಣ, ಕೃಷ್ಣ, ಆಂಜನೇಯ, ಧನ್ವಂತರಿಯೇ ಮೊದಲಾದ ದೇವತೆಗಳ ಆಲಯಗಳು ಕೂಡಾ ಇವೆ. ಆದ್ದರಿಂದ ಒಂದು ದೇವರ ನಂತರ ಮತೊ್ತಂದು ದೇವರಿಗೇ ಎಂದು ಉತ್ಸವಗಳು ನಡೆಯುತಾ್ತ ಇರುತ್ತವೆ. ಇಲ್ಲಿ ನಡೆಯುವ ಉತ್ಸವಗಳಲ್ಲಿ ಪ್ರಮುಖವಾದದು ಡಿಸೆಂಬರ್ ಮಾಹೆಯಲ್ಲಿ ಬರುವ ವೈಕುಂಠ ಏಕಾದಶಿ ಉತ್ಸವ.
ಶತಕೋಟಿಯನ್ನು ಮುಟ್ಟಿದ ಅಸಾ್ತ
ಕ್ರಿ.ಶ. 2000ದ ಮೇ ತಿಂಗಳು 11ನೆಯ ತಾರೀಕು ಬೆಳಗಿನ ಜಾವ 5 ಗಂಟೆಗೇ ದೆಹಲಿಯಲ್ಲಿ ಒಂದು ಆಸ್ಪತ್ರೆಯಲ್ಲಿ ಹುಟ್ಟಿದ ಆಸಾ್ತ ಎಂಬ ಹೆಣ್ಣು ಮಗುವು ಚರಿತಾ್ರರ್ಹ ವೆನಿಸಿತು. ಅವಳ ಜನನದಿಂದಾಗಿ ಭಾರತದೇಶದ ಜನ ಸಂಖ್ಯೆಯು ಶತಕೋಟಿಯನ್ನು (1,000,000,000) ಮುಟ್ಟಿತು. 20ನೆಯ ಶತಮಾನದ ಆರಂಭದಲ್ಲಿ ನಮ್ಮ ದೇಶದ ಜನ ಸಂಖ್ಯೆಯು 230,000,000 ಇದ್ದಿತು.
ಶತಮಾನದ ಅಂತ್ಯದಲ್ಲಿ ವಿಶ್ವದ ಜನಸಂಖ್ಯೆಯ ಮೊತ್ತ 6,000,000,000. ವಿಶ್ವ ಆರೋಗ್ಯ ಸಂಸ್ಥೆಯ (ಏ) ಪ್ರಕಾರ 2045 ನೇ ವರ್ಷಕೇ್ಕ ಭಾರತ ದೇಶವು ಅತ್ಯಧಿಕ ಜನಸಂಖ್ಯೆಯುಳ್ಳ ದೇಶವಾಗಿರುತ್ತದೆ.
ಶತಮಾನದ ಅಂತ್ಯದಲ್ಲಿ ವಿಶ್ವದ ಜನಸಂಖ್ಯೆಯ ಮೊತ್ತ 6,000,000,000. ವಿಶ್ವ ಆರೋಗ್ಯ ಸಂಸ್ಥೆಯ (ಏ) ಪ್ರಕಾರ 2045 ನೇ ವರ್ಷಕೇ್ಕ ಭಾರತ ದೇಶವು ಅತ್ಯಧಿಕ ಜನಸಂಖ್ಯೆಯುಳ್ಳ ದೇಶವಾಗಿರುತ್ತದೆ.
No comments:
Post a Comment