Monday, 6 February 2012

ಪಿಯುಸಿ ಸಿಇಟಿ ಆನ್‌ಲೈನ್ ಪ್ರಶ್ನೆ ಪತ್ರಿಕೆಗಳು ಲಭ್ಯ

ಪ್ರಸಕ್ತ ವರ್ಷ ಎರಡನೇ ಪಿಯುಸಿ ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪೂರ್ವತಯಾರಿಗೆ ಅನುಕೂಲವಾಗಲೆಂದು ಆನ್‌ಲೈನ್ ಪ್ರಶ್ನೆ ಪತ್ರಿಕೆಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ಪ್ರಶ್ನೆಗಳ ಜೊತೆಗೆ ಉತ್ತರಗಳೂ ದೊರೆಯಲಿವೆ.

ಪರೀಕ್ಷೆ ಸಮಯದಲ್ಲಿ ಸರಿಯಾದ ಪುಸ್ತಕಗಳು ದಕ್ಕದೆ ವಿದ್ಯಾರ್ಥಿಗಳು ದಿಕ್ಕೆಡದಿರಲೆಂದು ಈ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು, ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳಬೇಕೆಂದು ಶಿಕ್ಷಣ ಇಲಾಖೆ ತಿಳಿಸಿದೆ. ಪ್ರಶ್ನೆ ಪತ್ರಿಕೆಗಳು ಶಿಕ್ಷಣ ಇಲಾಖೆ ಮತ್ತು ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯ.

ಈ ಮಾದರಿ ಪ್ರಶ್ನೆಪತ್ರಿಕೆಗಳ ಜೊತೆಗೆ ಹಿಂದಿನ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳು ಉತ್ತರಗಳ ಸಮೇತ ಅಂತರ್ಜಾಲ ತಾಣದಲ್ಲಿ ಸಿಗಲಿವೆ ಎಂದು ಪದವಿಪೂರ್ಣ ಶಿಕ್ಷಣ ಇಲಾಖೆಯ ನಿರ್ದೇಶಕಿ ರಶ್ಮಿ ವಿ ಅವರು ತಿಳಿಸಿದ್ದಾರೆ. pue.kar.nic.inನಲ್ಲಿ ಪ್ರಶ್ನೆಗಳಿಗಾಗಿ ವಿದ್ಯಾರ್ಥಿಗಳು ಜಾಲಾಡಬಹುದು.