Friday, 4 November 2011

ಕಾಪಿ (ನಕಲು), ragging ಮುಂತಾದ ಕೆಟ್ಟ ರೂಢಿಗಳಿಂದ ದೂರವಿರಿ !

ಕಾಪಿ ಮಾಡುವುದು ಒಂದು ರೀತಿಯಲ್ಲಿ ಕಳ್ಳತನ ಮತ್ತು ragging ಎಂದರೆ ಅಸುರೀ ಆನಂದಕ್ಕಾಗಿ ಮಾಡುವಂತಹ ವಿಕೃತ ಕೃತಿಗಳಾಗಿವೆ. ಮುಂದಿನ ಜೀವನದಲ್ಲಿ ಭ್ರಷ್ಟಾಚಾರಿ ಮತ್ತು ಅಪರಾಧಿಗಳಾಗುವ ಬೀಜವು ಇಂತಹ ಕೆಟ್ಟ ರೂಢಿಗಳಲ್ಲಿದೆ. ವಿದ್ಯಾರ್ಥಿ ಮಿತ್ರರೇ, ಶಿಕ್ಷಣ ಪಡೆಯುವ ಹಿಂದಿನ ಧ್ಯೇಯವು ಇದೇ ಆಗಿದೆಯೇನು? ನಾವು ಕೇವಲ ಹೊಟ್ಟೆಪಾಡಿಗಲ್ಲ,ಸದಾಚರಣೆ ಮತ್ತು ಸುಸಂಸ್ಕೃತರಾಗಲು ಶಿಕ್ಷಣವನ್ನು ಪಡೆಯಬೇಕಾಗಿದೆ. ragging ನಂತಹ ವಿಕೃತಿಗೆ ಸುಖವೆಂದು ತಿಳಿಯಬಾರದು, ಸಂಸ್ಕಾರ ಮತ್ತು ನೈತಿಕಮೌಲ್ಯಗಳ ಜೋಪಾಸನೆಯನ್ನು ಸುಖವೆಂದು ತಿಳಿದು ಜೀವನವನ್ನು ಸಾಗಿಸಬೇಕಾಗಿದೆ. ಧರ್ಮಶಿಕ್ಷಣದಿಂದಲೇ ನಾವು ಇಂತಹ ಜೀವನವನ್ನು ಸಾಗಿಸಬಲ್ಲೆವು.
ಕಾಪಿ, ragging ನಂತಹ ಶಬ್ದಗಳು ನಮ್ಮ ಭಾಷೆಯಲ್ಲಿಯೂ ಇಲ್ಲ. ಇದರಿಂದ ನಮ್ಮ ಹಿಂದೂ ಸಂಸ್ಕೃತಿಯು ಎಷ್ಟು ಶ್ರೇಷ್ಠವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ. ಈ ಶಬ್ದವನ್ನು ಶಿಕ್ಷಣಕ್ಷೇತ್ರದಿಂದ ಶಾಶ್ವತವಾಗಿ ನಾಶ ಮಾಡಬೇಕಾಗಿದ್ದಲ್ಲಿ ಧರ್ಮಾಧಿಷ್ಠಿತ ಶಿಕ್ಷಣಪದ್ಧತಿಯನ್ನೇ ಆಧರಿಸಬೇಕಾಗಿದೆ.

No comments:

Post a Comment