Pages
Home
ಬಾಲವನದ ಬಗ್ಗೆ
ಅಕ್ಷರ
ನಲಿವು
ಹೊಸ ಬಗೆ ಕಲಿಕೆ
ಪ್ರಾಥಮಿಕ ಹಂತ
ದಾನ ಮಾಡಿ
Thursday, 4 September 2014
ಮಕ್ಕಳೇ, ಓದುವಾಗ ತೆಗೆದುಕೊಳ್ಳಬೇಕಾದ ಜಾಗೃತೆ!
ಯಾವಾಗಲೂ ನೆಟ್ಟಗೆ ಕುಳಿತುಕೊಂಡು ಓದಬೇಕು. ಓದುವಾಗ ಮೇಜು ಹಾಗೂ ಕುರ್ಚಿ ಸ್ಥಿರವಾಗಿರಬೇಕು ಹಾಗೂ ಪುಸ್ತಕ ಮತ್ತು ಕಣ್ಣು ಇವುಗಳಲ್ಲಿನ ಅಂತರ ೩೦ ರಿಂದ ೩೫ ಸೆ.ಮಿ.ನಷ್ಟಿರಬೇಕು. ಓದುವ ಕೋಣೆಯಲ್ಲಿ ಸರಿಯಾಗಿ ಬೆಳಕಿರಬೇಕು. ಸಾಧ್ಯವಿದ್ದರೆ ಪುಸ್ತಕದ ಮೇಲೆ ಹಿಂದಿನಿಂದ ಅಥವಾ ಎಡ ಬದಿಯಿಂದ ಬೆಳಕು ಬೀಳಬೇಕು. ಅಂದರೆ ಪುಸ್ತಕ ಎಡ ಕೈಯಲ್ಲಿ ಹಿಡಿದು ಓದುವಾಗ ಬೆರಳುಗಳ ನೆರಳು ಬೀಳ ಬಾರದು.
ಓದುವಾಗ ಮಧ್ಯ-ಮಧ್ಯದಲ್ಲಿ ಕಣ್ಣು ಮುಚ್ಚ ಬೇಕು. ವಾಚನ ಹಾಗೂ ಬೆರಳಚ್ಚು, ಚಿತ್ರ ಬಿಡಿಸುವುದು, ಹೊಲಿಗೆ ಇತ್ಯಾದಿ ಹೆಚ್ಚು ಸಮಯ ಮಾಡಬೇಕಿದ್ದರೆ ಪ್ರತಿ ೧೫-೨೦ ನಿಮಿಷಕ್ಕೊಮ್ಮೆ ಸ್ವಲ್ಪ ಸಮಯ ನಿಲ್ಲಿಸಿ ೧-೨ ನಿಮಿಷ ಕಣ್ಣು ಮುಚ್ಚಿಕೊಳ್ಳಬೇಕು ಮತ್ತು ಯಾವುದಾದರೂ ವಸ್ತುವನ್ನು ನೋಡಿ ಧ್ಯಾನ ಮಾಡಬೇಕು ಅಥವಾ ದೂರದ ಯಾವುದಾದರೂ ವಸ್ತುವಿನ ಮೇಲೆ ದೃಷ್ಟಿ ಸ್ಥಿರಗೊಳಿಸಬೇಕು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment