Saturday, 20 August 2011

ಬಾಲ ಕಾರ್ಮಿಕರ ಉಳಿಸಲು ಇ ಪತ್ರಿಕೆ

ಬಾಲಕಾರ್ಮಿಕತೆ ನಿರ್ಮೂಲನೆಯೆಡೆಗೆ ಬಾ.ಕಾ.ಸಂ.ಕೇಂದ್ರವು ಬಾಲವಾಣಿ ಎಂಬ ಹೆಸರಿನ ಧ್ವೈಮಾಸಿಕ ವಿದ್ಯುನ್ಮಾನ ನಿಯತಕಾಲಿಕೆ (ಇ-ಜರ್ನಲ್) ಅನ್ನು ಪ್ರಕಟಿಸುತ್ತಿದೆ. ಮಕ್ಕಳ ಕಲ್ಯಾಣ ಹಾಗೂ ಇದಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಪ್ರಪಂಚಾದ್ಯಂತ ಆಗುತ್ತಿರುವ ಇತ್ತೀಚಿನ ಬೆಳವಣಿಗೆಗಳು ಹಾಗೂ ಅಭಿವೃದ್ಧಿಯನ್ನು ಬಿಂಬಿಸುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ.

ಸಮಾಜದ ಉನ್ನತ ವರ್ಗದ ಜನರನ್ನು ತಲುಪಿ ಇದರ ಬಗ್ಗೆ ಗಮನ ಸೆಳೆಯುವಲ್ಲಿ 'ಬಾಲವಾಣಿ' ಪ್ರಯತ್ನಿಸುತ್ತಿದೆ. 'ಬಾಲವಾಣಿ'ಯ ಪ್ರತಿ ಸಂಚಿಕೆಯೂ ವಿಭಿನ್ನ ವಿಷಯಗಳ ಬಗ್ಗೆ ನೋಟ ಬೀರಲಿದೆ. ಸರಕಾರದ ಹಲವು ಕಾರ್ಯಕ್ರಮಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಹಲವು ಯೋಜನೆಗಳು, ಸಾಧನೆಗಳನ್ನು ಎಲ್ಲರಿಗೆ ತಲುಪಿಸುವಲ್ಲಿ ಸಹಾಯ ಮಾಡುತ್ತದೆ. ಈ ಮೂಲಕ ವಾಚಕರಲ್ಲಿ ಮಕ್ಕಳ ಕಲ್ಯಾಣ ಹಾಗೂ ಬಾಲ ಕಾರ್ಮಿಕತೆ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ. ವಿವಿಧ ಸಂಸ್ಥೆಗಳು, ಕ್ರಿಯಾಶೀಲರು ಹಾಗೂ ಇತರರು ತಮ್ಮ ಚಿಂತನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಒಚಿದು ಉತ್ತಮ ವೇದಿಕೆಯಾಗಿದೆ.
ಈ ನಿಯತಕಾಲಿಕದಲ್ಲಿ ಸರಕಾರದ ಹಲವು ಕಾರ್ಯಕ್ರಮಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ನಾನಾ ಯೋಜನೆಗಳು, ಸಾಧನೆಗಳನ್ನು ಒಳಗೊಂಡಿದೆ. 'ಬಾಲವಾಣಿ'ಯ ಸಂಚಿಕೆ ನೋಡಲು ಸಂಪರ್ಕಿಸುವ ವೆಬ್‌ಸೈಟ್: www.karunadu.gov.in/karnatakachildlabour


ಸಂಪರ್ಕ ವಿಳಾಸ:
Karnataka State Resource Centre on Child Labour (KSRCCL)
Karnataka State Child Labour Eradication
Project Society
Department of Labour , Government of Karnataka
Karmika Bhavana, ITI Compound,
Bannerghatta Road , Bangalore - 560 029
Phone : 080-22453549, 080-26531258 Extn 152
E-Mail: ksrccl@yahoo.in

Thursday, 18 August 2011

ಭಾರತದ ಪ್ರಧಾನಮಂತ್ರಿಗಳು

ನಮ್ಮೂರ ಹುಡುಗ ಅಕಾಶ್ ನಾಯಕ ನ ಭಾಷಣವನ್ನೂಮ್ಮೆ ನೋಡಿ.

ಭಾರತದ ರಾಷ್ಟ್ರಪತಿಗಳು

 
ಭಾರತದ ಅಧ್ಯಕ್ಷರ ಮುದ್ರೆಗಳು
ಭಾರತದ ಅಧ್ಯಕ್ಷರು ಅಥವ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತ ಗಣರಾಜ್ಯದ ಪ್ರಥಮ ಪ್ರಜೆ, ಮತ್ತು ಭಾರತೀಯ ಸೈನ್ಯದ ದಂಡನಾಯಕರು.

ಭಾರತದ ಪ್ರಸಕ್ತ ಅಧ್ಯಕ್ಷರು ಪ್ರತಿಭಾ ಪಾಟೀಲ್.

ಚರಿತ್ರೆ

ಆಗಸ್ಟ್ ೧೯೪೭ರಲ್ಲಿ ಭಾರತ ಬ್ರಿಟಿಷ್ ಆಡಳಿತದಿಂದ ಸ್ವತಂತ್ರವಾಯಿತು. ಆಗ ಇನ್ನೂ ಅಧ್ಯಕ್ಷರ ಪದವಿ ಇರಲಿಲ್ಲ. ಭಾರತ ಸ್ವತಂತ್ರವಾಗಿದ್ದರೂ ಅಧಿಕೃತವಾಗಿ ಬ್ರಿಟಿಷ್ ಚಕ್ರವರ್ತಿಯ ಪ್ರತಿನಿಧಿಯಾಗಿ ಭಾರತದಿಂದ ನೇಮಿತರಾದ "ಗವರ್ನರ್ ಜನರಲ್" ಪದವಿಯಲ್ಲಿ ಒಬ್ಬರು ಇರಬೇಕಾಗಿದ್ದಿತು. ಸ್ವತಂತ್ರ ರಾಷ್ಟ್ರಕ್ಕೆ ಇದು ಒಪ್ಪುವ೦ಥದ್ದಲ್ಲವೆಂಬ ಅಭಿಪ್ರಾಯ ಅನೇಕರಲ್ಲಿ ಇತ್ತು. ಜನವರಿ ೧೯೪೯ರಲ್ಲಿ ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ ಅಧ್ಯಕ್ಷರು ಶ್ರೀ ಬಾಬು ರಾಜೇಂದ್ರ ಪ್ರಸಾದ್.

ಸಾ೦ವಿಧಾನಿಕ ಪಾತ್ರ

ಭಾರತೀಯ ಸಂವಿಧಾನದ ೫೨ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ಅಧ್ಯಕ್ಷರು:


ಭಾರತೀಯ ಪ್ರಜೆಯಾಗಿರಬೇಕು
ಭಾರತದಲ್ಲೇ ಜನಿಸಿದವರಾಗಬೇಕೆಂಬ ನಿಯಮವೇನಿಲ್ಲ
ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು


ಅಧಿಕೃತವಾಗಿ ಕಾರ್ಯಾಂಗದ ಮುಖ್ಯಸ್ಥರಾದರೂ, ಭಾರತದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಅಧಿಕಾರವುಳ್ಳ ಸ್ಥಾನ ಪ್ರಧಾನಮಂತ್ರಿಗಳದ್ದು (ಸಂವಿಧಾನದ ೭೪ ನೆಯ ಪರಿಚ್ಛೇದದಂತೆ). ಭಾರತದ ಸಂವಿಧಾನದ ೫೩ ನೆಯ ಪರಿಚ್ಛೇದದಂತೆ ಸಂಸತ್ತಿಗೆ ಅಧ್ಯಕ್ಷರ ಅಧಿಕಾರವನ್ನು ಬೇರೊಂದು ಪದವಿಯಲ್ಲಿರುವ ವ್ಯಕ್ತಿಗೆ ವರ್ಗಾಯಿಸುವ ಶಕ್ತಿಯುಂಟು.


ಸಾಂಪ್ರದಾಯಿಕವಾಗಿ ಅಧ್ಯಕ್ಷರ ಕೆಲಸಗಳಲ್ಲಿ ಒಂದು ಪ್ರಧಾನಮಂತ್ರಿ ಮತ್ತು ಇತರ ಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಡುವುದು.


ಅಧ್ಯಕ್ಷರನ್ನು ಚುನಾಯಿಸುವ ವ್ಯಕ್ತಿಗಳೆಂದರೆ:

ಸಂಸತ್ತಿನ ಎರಡೂ ಸಭೆಗಳ ಸದಸ್ಯರು
ಪ್ರತಿ ರಾಜ್ಯದ ವಿಧಾನಸಭೆಯ ಸದಸ್ಯರು


ಪ್ರತಿ ಸದಸ್ಯರ ಕೈಯಲ್ಲಿರುವ ಮತಗಳ ಸಂಖ್ಯೆ ಅವರ ರಾಜ್ಯದ ಜನಸಂಖ್ಯೆ, ಆ ರಾಜ್ಯದಿಂದ ಇರುವ ಶಾಸಕರ ಸಂಖ್ಯೆ, ಮೊದಲಾದವುಗಳ ಅನುಗುಣವಾಗಿರುತ್ತದೆ.


ಸಂವಿಧಾನದ ೬೧ ನೆಯ ಪರಿಚ್ಛೇದದ೦ತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನದಿ೦ದ ತೆಗೆಯುವ ಅಧಿಕಾರ ಸಂಸತ್ತಿಗುಂಟು.

ಅಧ್ಯಕ್ಷರ ಪಟ್ಟಿ

ಅನುಕ್ರಮ ಹೆಸರು ಅಧ್ಯಕ್ಷತೆ ಆರಂಭ ಅಧ್ಯಕ್ಷತೆ ಅಂತ್ಯ ಚಿತ್ರ
೦೧ ಡಾ. ರಾಜೇಂದ್ರ ಪ್ರಸಾದ್ ಜನವರಿ ೨೬, ೧೯೫೦ ಮೇ ೧೩, ೧೯೬೨ ಡಾ. ರಾಜೇಂದ್ರ ಪ್ರಸಾದ್
೦೨ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಮೇ ೧೩, ೧೯೬೨ ಮೇ ೧೩, ೧೯೬೭ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್
೦೩ ಡಾ. ಜಾಕಿರ್ ಹುಸೇನ್ ಮೇ ೧೩, ೧೯೬೭ ಮೇ ೩, ೧೯೬೯ ಡಾ. ಜಾಕಿರ್ ಹುಸೇನ್
* ವರಾಹಗಿರಿ ವೆಂಕಟ ಗಿರಿ ಮೇ ೩, ೧೯೬೯ ಜುಲೈ ೨೦, ೧೯೬೯ ವರಾಹಗಿರಿ ವೆಂಕಟ ಗಿರಿ
* ಮಹಮ್ಮದ್ ಹಿದಾಯತುಲ್ಲಾ ಜುಲೈ ೨೦, ೧೯೬೯ ಆಗಸ್ಟ್ ೨೪, ೧೯೬೯ ಮಹಮ್ಮದ್ ಹಿದಾಯತುಲ್ಲಾ
೦೪ ವರಾಹಗಿರಿ ವೆಂಕಟ ಗಿರಿ ಆಗಸ್ಟ್ ೨೪, ೧೯೬೯ ಆಗಸ್ಟ್ ೨೪, ೧೯೭೪ ವರಾಹಗಿರಿ ವೆಂಕಟ ಗಿರಿ
೦೫ ಫಕ್ರುದ್ದೀನ್ ಅಲಿ ಅಹ್ಮದ್ ಆಗಸ್ಟ್ ೨೪, ೧೯೭೪ ಫೆಬ್ರವರಿ ೧೧, ೧೯೭೭ ಫಕ್ರುದ್ದೀನ್ ಅಲಿ ಅಹ್ಮದ್
* ಬಿ ಡಿ ಜತ್ತಿ ಫೆಬ್ರವರಿ ೧೧, ೧೯೭೭ ಜುಲೈ ೨೫, ೧೯೭೭ ಬಿ ಡಿ ಜತ್ತಿ
೦೬ ನೀಲಂ ಸಂಜೀವ ರೆಡ್ಡಿ ಜುಲೈ ೨೫, ೧೯೭೭ ಜುಲೈ ೨೫, ೧೯೮೨ ನೀಲಂ ಸಂಜೀವ ರೆಡ್ಡಿ
೦೭ ಗ್ಯಾನಿ ಜೈಲ್ ಸಿಂಗ್ ಜುಲೈ ೨೫, ೧೯೮೨ ಜುಲೈ ೨೫, ೧೯೮೭ ಗ್ಯಾನಿ ಜೈಲ್ ಸಿಂಗ್
೦೮ ರಾಮಸ್ವಾಮಿ ವೆಂಕಟರಾಮನ್ ಜುಲೈ ೨೫, ೧೯೮೭ ಜುಲೈ ೨೫, ೧೯೯೨ ರಾಮಸ್ವಾಮಿ ವೆಂಕಟರಾಮನ್
೦೯ ಡಾ. ಶಂಕರ ದಯಾಳ ಶರ್ಮ ಜುಲೈ ೨೫, ೧೯೯೨ ಜುಲೈ ೨೫, ೧೯೯೭ ಡಾ. ಶಂಕರ ದಯಾಳ ಶರ್ಮ
೧೦ ಡಾ. ಕೆ ಆರ್ ನಾರಾಯಣನ್ ಜುಲೈ ೨೫, ೧೯೯೭ ಜುಲೈ ೨೫, ೨೦೦೨ ಡಾ. ಕೆ ಆರ್ ನಾರಾಯಣನ್
೧೧ ಡಾ. ಎ ಪಿ ಜೆ ಅಬ್ದುಲ್ ಕಲಮ್ ಜುಲೈ ೨೫, ೨೦೦೨ ಜುಲೈ ೨೫, ೨೦೦೭ ಡಾ. ಎ ಪಿ ಜೆ ಅಬ್ದುಲ್ ಕಲಮ್
೧೨ ಪ್ರತಿಭಾ ಪಾಟೀಲ್ ಜುಲೈ ೨೫, ೨೦೦೭ ಪ್ರಸಕ್ತ ಪ್ರತಿಭಾ ಪಾಟೀಲ್
* ಹಂಗಾಮಿ

ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್


ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್ ಜುಲೈ ೨೫, ೨೦೦೨ ರಿಂದ ಜುಲೈ ೨೫ ೨೦೦೭ ರ ತನಕ ಭಾರತದ ರಾಷ್ಟ್ರಪತಿಗಳಾಗಿದ್ದರು. ಇವರು ಭಾರತದ ಹನ್ನೊಂದನೇ ರಾಷ್ಟ್ರಪತಿಗಳಾಗಿ ಜುಲೈ ೨೫, ೨೦೦೨ ರಂದು ಅಧಿಕಾರ ಸ್ವೀಕರಿಸಿದರು.  
ರಾಮೇಶ್ವರಂನ ಧನುಷ್ಕೋಡಿಯಿಂದ, ರಾಜಧಾನಿ ದೆಹಲಿಯವರೆಗಿನ ಯಾತ್ರೆ, ಅವಿಸ್ಮರಣೀಯ. ರಾಷ್ಟ್ರಪತಿ-ಹುದ್ದೆ ಡಾ. ಕಲಾಂರವರನ್ನು, ಅರಸಿ ಬಂತು.
ಇವರ ಜನನ ಅಕ್ಟೋಬರ್ ೧೫,೧೯೩೧ ರಂದು ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಡಿಯಲ್ಲಿ ಆಯಿತು. ೧೯೫೮ರಲ್ಲಿ ಮದ್ರಾಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನೋಲಜಿಯಿಂದ ಏರೋನಾಟಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿಯನ್ನು ಪಡೆದರು. ಹಾಗೆಯ ಪಿ.ಎಚ್.ಡಿ.,ಎಮ್ ಟೆಕ್.ಪದವಿಯನ್ನು ಪಡೆದಿದ್ದಾರೆ.ಡಿಆರ್‍ಡಿಓ ಹಾಗೂ ಇಸ್ರೋಗಳಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಭಾರತದ ಅಣುಬಾಂಬು ಹಾಗು ಕ್ಷಿಪಣಿಗಳ ಜನಕ ಎಂದೇ ಪ್ರಸಿದ್ಧರು. ಇವರು ಬ್ರಹ್ಮಚಾರಿಗಳು. ದಿ ಗ್ರೆಟ್ ಮ್ಯಾನ್ .

ಡಾ. ಕಲಾಂ ರಚಿಸಿದ ಕೆಳಗಿನ ಪುಸ್ತಕಗಳು ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿಯ ಸೆಲೆಗಳಾಗಿವೆ :

೧, * Wings of Fire (ಕನ್ನಡ ಅನುವಾದ - ಅಗ್ನಿಯ ರೆಕ್ಕೆಗಳು): ಈ ಪುಸ್ತಕವು ಇವರ ಆತ್ಮಕಥೆಯಾಗಿದ್ದು, ಇವರ ಸರಳ ಹಾಗೂ ಮಾದರಿ ಜೀವನದ ಅನೇಕ ಘಟನೆಗಳನ್ನು ಓದುಗರಿಗೆ ತೆರೆದಿಡುತ್ತದೆ. ಇಂದಿನ ಯುವ ಪೀಳಿಗೆಗೆ ಇದೊಂದು ಅನುರೂಪವಾದ ಮಾರ್ಗದರ್ಶಿ.

೨. * India 2020 : ಈ ಪುಸ್ತಕದಲ್ಲಿ ಕಲಾಮ್ ರವರು ೨೦೨೦ನೇ ಇಸವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಯುವ ಜನಾಂಗಕ್ಕೆ ಸ್ಪೂರ್ತಿಯಾಗಬಲ್ಲಂತಹ ಕೃತಿ.

" ಕಲಾಂ ಮೇಷ್ಟ್ರು ", ವಿಶೇಷ ಕಾಳಜಿವಹಿಸಿ, ಭಾರತದ ಮಕ್ಕಳಿಗಾಗಿಯೇ ರಚಿಸಿದ ಬಹುಮೂಲ್ಯ ಕೃತಿ.

ಕನ್ನಡ ಪುಸ್ತಕ ಪ್ರಾಧಿಕಾರಗಳೂರು, ಭಾರತದೇಶದ ಮಕ್ಕಳಿಗಾಗಿಯೇ ರಚಿಸಿದ, ಒಂದು ಅಪರೂಪದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅದನ್ನು ರಚಿಸಿದವರು. ಪ್ರೊ. ಎಚ್. ಆರ್. ರಾಮಕೄಷ್ಣರಾಯರು. : ISBN : 81-7713-199-0. ಇದರ ೧,೦೦೦ ಪ್ರತಿಗಳು ಮಾರಾಟವಾಗಿವೆ.

ಜನ್ಮ ದಿನಾಂಕ: ಅಕ್ಟೋಬರ್ ೧೫ ೧೯೩೧
ಭಾರತದ ರಾಷ್ಟ್ರಪತಿಗಳು
ಅವಧಿಯ ಕ್ರಮಾಂಕ: ೧೧ನೆ ರಾಷ್ಟ್ರಪತಿ
ಅಧಿಕಾರ ವಹಿಸಿದ ದಿನಾಂಕ: ೨೫ ಜುಲೈ ೨೦೦೨
ಅಧಿಕಾರ ತ್ಯಜಿಸಿದ ದಿನಾಂಕ: ೨೫ ಜುಲೈ ೨೦೦೭
ಪೂರ್ವಾಧಿಕಾರಿ: ಕೆ.ಆರ್. ನಾರಾಯಣನ್
ಉತ್ತರಾಧಿಕಾರಿ: ಪ್ರತಿಭಾ ಪಾಟೀಲ್