Monday, 23 January 2012

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವುದು ಹೇಗೆ?

ಮಕ್ಕಳಲ್ಲಿ ಜ್ಞಾಪಕ ಶಕ್ತಿಯ ಕೊರತೆ ಅವರ ಶಿಕ್ಷಣ ಮತ್ತು ವೈಯ್ಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಜ್ಞಾಪಕ ಶಕ್ತಿಯ ಕೊರತೆ ಮಕ್ಕಳ ಆತ್ಮವಿಶ್ವಾಸವನ್ನೂ ಕುಂಠಿತಗೊಳಿಸುತ್ತದೆ. ಆದರೆ ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಕೆಲವು ನೈಸರ್ಗಿಕ ವಿಧಾನವನ್ನು ಇಲ್ಲಿ ನೀಡಲಾಗಿದೆ. ಅವುಗಳನ್ನು ಮಕ್ಕಳಿಗೆ ನೀಡಿದರೆ ಜ್ಞಾಪಕ ಶಕ್ತಿ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ.

ಜ್ಞಾಪಕ ಶಕ್ತಿ ಹೆಚ್ಚಿಸುವ ವಿಧಾನ:
* ಮೆಂತ್ಯೆ ಸೊಪ್ಪು, ಮೂಲಂಗಿಯನ್ನು ಸಣ್ಣಗೆ ಹೆಚ್ಚಿಕೊಂಡು ಎರಡನ್ನೂ ಮಿಶ್ರಣ ಮಾಡಿ ಅದಕ್ಕೆ ಉಪ್ಪು, ಮೆಣಸು, ಜೀರಿಗೆಯ ಒಗ್ಗರಣೆ ನೀಡಿ ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದನ್ನು ಹಸಿಯಾಗೂ ಸೇವಿಸಬಹುದು, ಇಲ್ಲವೆಂದರೆ ಸ್ವಲ್ಪ ಬೇಯಿಸಿಯೂ ಸೇವಿಸಬಹುದು.
* ಒಂದು ಚೂರು ಹಸಿ ಶುಂಠಿ, ಸ್ವಲ್ಪ ಜೀರಿಗೆ ಮತ್ತು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗಿದು ತಿನ್ನುತ್ತಿದ್ದರೆ ನಾಲಿಗೆ ರುಚಿ ಹೆಚ್ಚುವುದರ ಜೊತೆ ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.
* ಸೇಬನ್ನು ಪ್ರತಿದಿನ ಊಟವಾದ ನಂತರ ನಿರಂತರವಾಗಿ ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
* ನಲ್ಲಿಕಾಯನ್ನು ತಿನ್ನುತ್ತಿದ್ದರೆ ಜ್ಞಾಪಕ ಶಕ್ತಿ ಕ್ರಮೇಣ ಹೆಚ್ಚುತ್ತದೆ.
* ಹಾಲಿಗೆ ಏಲಕ್ಕಿ ಪುಡಿ ಸೇರಿಸಿ ಕುದಿಸಿ ಜೇನು ತುಪ್ಪ ಬೆರೆಸಿ ಮಕ್ಕಳಿಗೆ ನೀಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

Saturday, 17 December 2011

ಶಾಲಾ ಮಕ್ಕಳಿಗೆ ಯುಟೂಬ್ ವೆಬ್ ಸೈಟ್

ಶಾಲಾ ಮಕ್ಕಳಿಗಾಗಿ ಯುಟೂಬ್ ನೂತನ ವೆಬ್ ಸೈಟ್ ಬಿಡುಗಡೆ ಗೊಳಿಸಿದೆ. "ಯುಟೂಬ್ ಫಾರ್ ಸ್ಕೂಲ್" ಎಂಬ ನೂತನ ವೆಬ್ ಸೈಟ್ ನಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟ ವಿಡಿಯೋ ಹೊರತಾಗಿ ಬೇರೇನೂ ವಿಡಿಯೋ ಇರುವುದಿಲ್ಲ.

ಶಾಲಾ ಮಕ್ಕಳಿಗೆ ಯುಟೂಬ್ ನ ಇತರ ವಿಡಿಯೋಗಳು ತೊಂದರೆ ನೀಡುತ್ತಿದ್ದು ಇದರಿಂದ ಮಕ್ಕಳಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತ ವಿಡಿಯೋಗಳು ಲಭ್ಯವಾಗದ ಹಿನ್ನಲೆಯಲ್ಲಿ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ. ಇಒ ವೆಬ್ ಸೈಟ್ ನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ನಾಲ್ಕೂವರೆ ಲಕ್ಷ ವಿಡಿಯೋಗಳು ಲಭ್ಯವಿದೆ.

ಈ ವಿಡಿಯೋಗಳನ್ನು ಶಿಕ್ಷಕರು ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪರಿಚಯಿಸಬಹುದಾಗಿದೆ. ಇದರಿಂದ ಶಿಕ್ಷಕರಿಗೂ ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಬಹುದಾಗಿದೆ.


ಯುಟೂಬ್ ಫಾರ್ ಸ್ಕೂಲ್ ನ ನೂತನ ವೆಬ್ ಸೈಟ್ ನ ಹೆಚ್ಚಿನ ಮಾಹಿತಿಗಾಗಿ: www.youtube.com/schools