ಈಗೀಗ ಮಕ್ಕಳು ದೂರದ ಶಾಲೆಗಳಿಗೆ ಹೋಗುವುದು,ಹಾಗಾಗಿ ಶಾಲಾ ವಾಹನದ ಉಪಯೋಗ ಮಾಡುವುದು ಹೆಚ್ಚುತ್ತಿದೆ.ಇದರಿಂದ ಹೆತ್ತವರು,ಮಕ್ಕಳ ಜತೆ ಸಂಪರ್ಕದಲ್ಲಿರಲು ಬಯಸಿ,ಅದನ್ನು ಸಾಧ್ಯವಾಗಿಸುವ ಮೊಬೈಲನ್ನು ಮಕ್ಕಳಿಗೆ ಕೊಡಿಸಲು ಬಯಸುತ್ತಾರೆ.ತಜ್ಞರ ಪ್ರಕಾರ ಹನ್ನೆರಡು ಮೀರಿದವರಿಗಷ್ಟೇ ಮೊಬೈಲ್ ಬಳಕೆಗೆ ಕೊಡುವುದು ಉತ್ತಮ.ಹಾಗೆಂದು ಅದನ್ನು ಹದವರಿತು ಬಳಸುವ ಪ್ರಬುದ್ಧತೆಯಿಲ್ಲದವರಿಗೆ ಸೆಲ್‌ಫೋನ್ ಕೊಡಿಸುವುದು ಒಳಿತಲ್ಲ.ತರಗತಿ ನಡೆಯುವಾಗ ಮೊಬೈಲ್ ಬಳಸುವುದು,ಅದನ್ನು ದುರುಪಯೋಗ ಮಾಡಿ ಪರೀಕ್ಷಾ ಅಕ್ರಮಗೈಯಲು ಬಳಸುವುದು,ಹಾಡು ಕೇಳುತ್ತಾ ಅಥವ ಸಂದೇಶಗಳನ್ನು ಕಳುಹಿಸುತ್ತಾ ಕೂರುವುದು ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಕಂಡು ಬರುವ ದುರ್ಬಳಕೆಯ ವಿಧಾನಗಳು.ಇನ್ನು ಕ್ಯಾಮರಾ,ವಿಡಿಯೋ ಅಥವ ಅಂತರ್ಜಾಲ ಸಂಪರ್ಕದ ಅವಕಾಶ ಇರುವ ಇರುವ ಸೆಟ್‌ಗಳನ್ನು ಮಕ್ಕಳಿಗೆ ಕೊಡಿಸುವುದು ತರವಲ್ಲ.ಅಂತರ್ಜಾಲ ಇದ್ದರೆ,ಅದು ಅನಿರ್ಬಂಧಿತ ಅಂತರ್ಜಾಲ ಜಾಲಾಟಕ್ಕೆ ಮುಕ್ತ ರಹದಾರಿಯಾಗಿ ಬಿಡುತ್ತದೆ.ಸಿಕ್ಕಸಿಕ್ಕವರ ಚಿತ್ರ-ವಿಡಿಯೋ ತೆಗೆದು ಅದನ್ನು ಎಂಎಂಎಸ್ ಮಾಡಿ,ಇತರರನ್ನು ಕಾಡುವ ಮಕ್ಕಳೂ ಇದ್ದಾರೆ. ಸೆಲ್‌ಫೋನ್ ಕೊಡಿಸುವುದಕ್ಕೆ ಮಕ್ಕಳ ಜತೆ ಸಂಪರ್ಕಕ್ಕೆ ಅವಕಾಶ ಕೊಡುತ್ತದೆ ಎಂಬ ಕಾರಣ ಕೊಡುವ ಹೆತ್ತವರು,ಮಕ್ಕಳಿಗೆ ಅತ್ಯಂತ ಸಾಮಾನ್ಯ ಸಾಧನ ಕೊಡಿಸುವುದೇ ಶ್ರೇಯಸ್ಕರ.ಮಕ್ಕಳಿಗೆ ಎಲ್ಲಾ ಸೌಲಭ್ಯವಿರುವ, ಸ್ಮಾರ್ಟ್‌ಫೋನ್ ಕೊಡಿಸುವುದು ಸ್ಮಾರ್ಟ್ ತೀರ್ಮಾನವಂತೂ ಅಲ್ಲ!. ಉದಾಹರಣೆಗೆ ನೋಡಿ..http://www.emfnews.org/articles/2011/03/page/2/
No comments:
Post a Comment