ಬಾಲವನದ ಬಗ್ಗೆ

ಮನೆಯಲ್ಲಿ ತಾಯಿ,ತಂದೆಯ ಪೋಷಣೆ, ಶಾಲೆಯಲ್ಲಿ ಶಿಕ್ಷಕರಿಂದ ಶಿಕ್ಷಣ, ಸಂಸ್ಕೃತಿ ಮತ್ತು ಪರಂಪರೆ ಹಾಗೂ ಮಕ್ಕಳ ಮುಂದಿನ ಭವಿಷ್ಯದ ಬದುಕಿನ ಬಗ್ಗೆ ಕಲಿಯಲು ತೊಡಗಿರುವ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಬಾಲವನವನ್ನು ಅಭಿವೃದ್ಧಿ ಪಡಿಸಲಾಗಿದೆ.

ತಮ್ಮದೇ ಮಾತೃ ಭಾಷೆಯಲ್ಲಿ ಕಲಿಯಲು ತೊಡಗಿರುವ ಮಕ್ಕಳಿಗಾಗಿ ಈ ಸೇವೆ.

ಈ ವಲಯದಲ್ಲಿ ನಿಮಗೆ ಖುಷಿ ಮತ್ತು ಮೋಜು ಸಿಗುತ್ತದೆ. ಇದು ಮಗುವಿನ ಸಮಗ್ರ ಬೆಳವಣಿಗೆಗೆ ಸಹಾಯಕವಾಗಿದೆ.

ಇಲ್ಲಿ ಭಾರತದ ಜಾನಪದ ಕಥೆಗಳು, ಕವಿತೆಗಳು, ನುಡಿಮುತ್ತುಗಳು, ರಾಷ್ಟ್ರಪ್ರೇಮ, ದೇಶಭಕ್ತಿ, ಸಂಪ್ರದಾಯ, ಆಚಾರ ವಿಚಾರಗಳು, ಪಾಲನೆ, ಶಿಕ್ಷಣ ಪದ್ದತಿ, ವಿಜ್ಞಾನ, ಪರಿಸರ, ವನ್ಯಜೀವಿ, ಸಮಾಜ, ಕಲೆ, ಸಂಸ್ಕೃತಿ, ಜಾನಪದ,  ಮಕ್ಕಳಿಗೆ ಸಂಬಂಧಪಟ್ಟ ಅಂತರ ಜಾಲತಾಣಗಳ ವಿವರ, ನೀತಿ  ಕಥೆಗಳನ್ನು ಕೇಳಬಹುದು, ಪದ್ಯಗಳನ್ನು ಹಾಡಬಹುದು ನಮ್ಮ ಸುತ್ತಮುತ್ತಲಿನ ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು.


ನಮ್ಮೊಂದಿಗೆ ನೀವೂ ಹೆಜ್ಜೆಗೂಡಿಸುವಂತಿದ್ದರೆ, ನೀವು

*  ದಿನಕ್ಕೊಂದು ರೂಪಾಯಿ ಕೂಡಿಸಿ ನೀಡುವ ಮೂಲಕ ಬಾಲವನದ ಸದಸ್ಯರಾಗಬಹುದು.
*  ಬಾಲವನ ಕಾರ್ಯ ಚಟುವಟಿಕೆಗಳಿಗೆ ನಿಮ್ಮಿಂದಾದಷ್ಟು ಹಣದ ನೆರವು ನೀಡುವ ಮೂಲಕ
    ನಮ್ಮ ಬಳಗದಲ್ಲಿ ಒಬ್ಬರಾಗಬಹುದು
*  ಬಾಲವನದ ಪ್ರಯೋಗಗಳನ್ನು ಆಹ್ವಾನಿಸಿ ನಿಮ್ಮ ಶಾಲೆ/ಸಮಾರಂಭಗಳಲ್ಲಿ ಅರ್ಥಪೂರ್ಣ
    ಮನರಂಜನೆ ಒದಗಿಸುವ ಮೂಲಕವೂ ಬಾಲವನಕ್ಕೆ ನೆರವಾಗಬಹುದು.
*  ಭಾಲವನದ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ನೀಡಬಹುದು.
*  ಬಾಲವನದ ಕಾರ್ಯ ಚಟುವಟಿಕೆಗಳಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಿ
    ಪ್ರೋತ್ಸಾಹಿಸಬಹುದು.

ನಿಮ್ಮ ಸಲಹೆ ಸೂಚನೆಗಳಿಗೂ ಸ್ವಾಗತ.

ಬಾಲವನ
ಇದು ಮಕ್ಕಳ ಲೋಕ
ಚಂದ್ರು ಮಲ್ಟಿಮೀಡಿಯ
ಶಿವಾಜಿ ಸರ್ಕಲ್,
ಚಂದಾಪುರ ಮುಖ್ಯ ರಸ್ತೆ
ಆನೇಕಲ್ ನಗರ,
ಬೆಂಗಳೂರು-562106.
ಮೊ.9740463256.
ಮಿಂಚೆ: anekalbalavana@gmail.com