Sunday 13 November 2011

ಮಕ್ಕಳ ದಿನಾಚರಣೆ

20 ನೆ ನವಂಬರ್ ವಿಶ್ವ ಮಕ್ಕಳ ದಿನಾಚರಣೆ . 14 ನೆ ನವಂಬರ್ ಭಾರತದಲ್ಲಿ ಮಕ್ಕಳ ದಿನಾಚರಣೆ
   ಪ್ರಪಂಚದಲ್ಲಿ ನವೆಂಬರ್  20 ರಂದು ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ಆಚರಿಸುವರು. ಈ ದಿನವನ್ನು ಮಕ್ಕಳ ಬಾಲ್ಯವನ್ನು ಸಂಭ್ರಮದಿಂದ ಕಾಣಲು ಆಚರಿಸಲಾಗುವುದು. ಈ ದಿನವನ್ನು  ಬಾಲ್ಯದ ಹೆಸರಿನಲ್ಲಿ ಆಚರಿಸಲಾಗುವುದು.
    ಮಕ್ಕಳ ದಿನವನ್ನು 1959 ಕ್ಕೆ ಮೊದಲು ಜಗತ್ತಿನಾದ್ಯಂತ ಅಕ್ಟೋಬರ್ ತಿಂಗಳಲ್ಲಿ  ಆಚರಿಸುತ್ತಿದ್ದರು. ಈ ದಿನ ವನ್ನು ವಿಶ್ವ ಸಂಸ್ಥೆಯ ಸಾಮಾನ್ಯಸಭೆಯು ತೀರ್ಮಾನಿಸಿದಂತೆ ಪ್ರಥಮ ಬಾರಿಗೆ   1954 ರಲ್ಲಿ ಆಚರಿಸಲಾಯಿತು. ಇದನ್ನು ಮೂಲಭೂತ ಉದ್ಧೇಶ ಸಮುದಾಯದ ವಿನಿಮಯದ  ಹೆಚ್ಚಳ ಮತ್ತು ಮಕ್ಕಳ ತಿಳುವಳಿಕೆ ಜಾಸ್ತಿ ಮಾಡುವುದು,  ಅಲ್ಲದೆ ಮಕ್ಕಳಿಗೆ ಅನುಕೂಲವಾದ ಕಲ್ಯಾಣ ಕಾರ್ಯಕ್ರಮಗಳನ್ನು ಉತ್ತೇಜಿಸಲು  ಜಗತ್ತಿನಾದ್ಯಂತ  ಆಚರಣೆಯನ್ನು ಪ್ರಾರಂಭಿಸಲಾಯಿತು.
   ನವೆಂಬರ್  20ನ್ನು ವಿಶ್ವ ಮಕ್ಕಳ ದಿನವಾಗಿ ಆರಿಸಲು ಕಾರಣ, ಅದು  ವಿಶ್ವ ಸಂಸ್ಥೆಯು ಸಾಮಾನ್ಯ ಸಭೆಯು ಮಕ್ಕಳ ಹಕ್ಕುಗಳ ಘೋಷಣೆಯನ್ನು 1959ರಲ್ಲಿ, ಅಂಗೀಕರಿಸಿದ ದಿನ.  ಮಕ್ಕಳ ಹಕ್ಕುಗಳ ಸಮಾವೇಶವು 1989 ರಲ್ಲಿ  ಅದಕ್ಕೆ ಸಹಿ ಮಾಡಿತು. ಆಗಿನಿಂದ  191 ದೇಶಗಳು  ಇದನ್ನು ಒಪ್ಪಿವೆ.
   ಮಕ್ಕಳ ದಿನಾಚರಣೆಯನ್ನು ವಿಶ್ವಾದ್ಯಂತ  1953, ಅಕ್ಟೋಬರನಲ್ಲಿ ಆಚರಿಸಲಾಯಿತು. ಇದನ್ನು ಜಿನೆವಾದಲ್ಲಿನ ಅಂತರಾಷ್ಟ್ರೀಯ ಮಕ್ಕಳ ಕಲ್ಯಾಣ  ಸಮಿತಿಯು ಪ್ರಾಯೋಜಿಸಿತು.  ಅಂತರಾಷ್ಟ್ರೀಯ ಮಕ್ಕಳ ದಿನದ ಯೋಜನೆಯು ಶ್ರೀ. ಕೃಷ್ಣ ಮೆನೆನ್ ಅವರಿಂದ ಸೂಚಿಸಿದರು. 1954 ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಅದನ್ನು ಅನುಮೋದಿಸಿತು. ನವಂಬರ್ 20 ವಿಶ್ವ ಮಕ್ಕಳ ದಿನ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 1954 ರಲ್ಲಿ ಮಕ್ಕಳ ದಿನಾಚರಣೆ ಮಾಡಲು ಘೋಷಣೆ ಮಾಡಿತು. ಪ್ರಪಂಚದ ಎಲ್ಲ ರಾಷ್ಟ್ರಗಳು ಅದನ್ನು ಆಚರಿಸಲು  ಪ್ರೋತ್ಸಾಹಿಸಿತು. ಮಕ್ಕಳಲ್ಲಿ ಪರಸ್ಪರ ವಿನಮಯ ಮತ್ತು ಅರಿವು ಹೆಚ್ಚಿಸಲು,  ಮತ್ತು ಮಕ್ಕಳ ಕಲ್ಯಾಣ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಜಗತ್ತಿನಾದ್ಯಂತ ಕ್ರಮ ತೆಗೆದುಕೊಳ್ಳಲು  ಸಾಧ್ಯವಾಯಿತು.
ಈಗಾಗಲೇ ತೀಳಿಸಿರುವಂತೆ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಜವಹರಲಾಲ್ ನೆಹರು ಅವರ ಜನ್ಮದಿನವಾದ ನವಂಬರ ೧೪ ರಂದು ಆಚರಿಸಲಾಗುವುದು. ಅಂದು ಮಕ್ಕಳಿಗೆ ಖಷಿಯಿಂದ ಕುಣಿಯುವ ದಿನ, ಬಾಲ್ಯದ ಸೊಗಸು, ಬೆಡಗು , ಬೆರಗು ಮತ್ತು ನೆಹರು ಅವರ ಮಕ್ಕಳ ಮೇಲಿನ ಅಪಾರ ಅಕ್ಕರೆ ಪ್ರೀತಿಯನ್ನು ಸಂಭ್ರಮದಿಂದ ನೆನೆವ ದಿನ. ಭಾರತದಾದ್ಯಂತ “ ಮಕ್ಕಳದಿನಾಚರಣೆ “ಯನ್ನು ಬಹು ಸಡಗರ ಮತ್ತು ಸಂಭ್ರಮದಿಂದ ಆಚರಿಸುವರು.
    ಮಕ್ಕಳ ದಿನವನ್ನು  ಅವರಿಗೆ ಜೀವನದ ಸುಖವನ್ನು ಸವಿಯುವ ಹಕ್ಕನ್ನು ಹೊಂದಲು,  ದೇಶದ ಆರೋಗ್ಯವಂತ ಮತ್ತು ಪ್ರಜ್ಞಾವಂತ ನಾಗರೀಕರಾಗಿ ಬೆಳೆಯಲು ಅವಕಾಶ ನೀಡುವುದಕ್ಕಾಗಿ. ಆಚರಿಸಲಾಗುವುದು.  ನಿಮ್ಮ ಮಕ್ಕಳಿಗೆ ಅದೃಷ್ಟವಶದಿಂದ  ತನ್ನಲ್ಲಿರುವುದನ್ನು  ಇಲ್ಲದೆ ಇರುವ ಇತರರೊಂದಿಗೆ ಹಂಚಿಕೊಳ್ಳುವುದರ ಮೌಲ್ಯವನ್ನು ತಿಳಿಸಿದರೆ, ಮಗುವು ಹೊಣೆಯರಿತ ಮಾನವನಾಗಿ ಬೆಳೆಯಲು ಅನುವಾಗುವುದು. ಇದರ ಜೊತೆ ಇನ್ನೊಂದು ಮಗುವು ನಿರ್ಲಕ್ಷತೆಯಿಂದ ಬಾಲಾಪರಾಧಿಯಾಗುವುದನ್ನೂ ತಪ್ಪಿಸಿದಂತಾಗುವುದು.ಇದಕ್ಕೆ ಕಾರಣ ನಿಮ್ಮ ಮುಂದಾಲೋಚನೆ ಎಂಬ ತೃಪ್ತಿಯಾಗುವುದು.

ಮಕ್ಕಳದಿನಾಚರಣೆಯ ಮಹತ್ವ
   ಮಕ್ಕಳ ದಿನಾಚರಣೆಯ ವೈಭವ ಮತ್ತು ಪ್ರದರ್ಶನದ ನಡುವೆ ಚಾಚಾ ನೆಹರೂ ಅವರ ಸಂದೇಶವನ್ನು ನಾವು ಮರೆಯಬಾರದು. ಅದೆಂದರೆ ಮಕ್ಕಳಿಗೆ ಅವರ ಬೆಳವಣಿಗೆಗೆ ಸುರಕ್ಷಿತ ಮತ್ತು ಪ್ರೀತಿಯ ಪರಿಸರ ಇರಬೇಕು. ಅದಲ್ಲದೆ ಅವರಿಗೆ ಸಾಕಷ್ಟು ಮತ್ತು ಸಮಾನ ಅವಕಾಶಗಳನ್ನು ಪೂರೈಸಿ ಅವರಿಂದ  ದೇಶದ ಪ್ರಗತಿಗೆ ಕೊಡುಗೆ ಪಡೆಯಬಹುದು. ಈದಿನವು ನಮ್ಮಲ್ಲಿನ ಪ್ರತಿಯೊಬ್ಬರಿಗೂ ಮಕ್ಕಳ ಕಲ್ಯಾಣದ ಬಗೆಗಿನ ನಮ್ಮ ಬದ್ದತೆಯನ್ನು ಪುನರ್ ನವೀಕರಿಸಲು ನೆನಪು ಮಾಡುವುದು. ಮತ್ತು ಮಕ್ಕಳಿಗೆ ಅವರ ಚಾಚಾ ನಹರುವಿನ ಆದರ್ಶದಂತೆ ಮತ್ತು ಅವರ ಮಾದರಿಯಲ್ಲಿ ಬದುಕಲು ಕಲಿಸಬೇಕು.

    ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಯ್ದುಕೊಳ್ಳಲು ಕಾರಣ ನೆಹರು ಅವರಿಗೆ ಮಕ್ಕಳ ಬಗೆಗಿನ ಅಪಾರ ಪ್ರೀತಿ ಮತ್ತು ಮೋಹ. ಅಲ್ಲದೆ ನೆಹರು ಅವರು ಕೂಡಾ ದೇಶದ ವಿಶೇಷ ಮಗುವೆಂದೆ ಪರಿಗಣಿಸಬಹುದು. ಸ್ವಾತಂತ್ರ ಹೋರಾಟದಲ್ಲಿ ಅಪಾರವಾಗಿ ಬಹುಕಾಲ  ಶ್ರಮಿಸಿದವರು. ಆದಕ್ಕೆ ಭಾರತದಲ್ಲಿ  14ನೆ ನವಂಬರ್ ಅನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವರು. ಆ ದಿನ ಭಾರತದ  ದಂತ ಕಥೆಯಾದ ಸ್ವಾತಂತ್ರ ಹೋರಾಟಗಾರ  ಮತ್ತು ಭಾರತದ ಪ್ರಥಮ ಪ್ರಧಾನ ಮಂತ್ರಿ   ಜವಹರ ಲಾಲ ನೆಹುರು ಅವರ ಜನ್ಮದಿನ. 

   ಅವರಿಗೆ ಇರುವ  ಮಕ್ಕಳ ಬಗೆಗಿನ  ಅಪಾರ  ಪ್ರೇಮದ ಪ್ರತೀಕವಾಗಿ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತಿದೆ.

    ಈ ದಿನ ನಾವು ಮಕ್ಕಳ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿ ಬದ್ಧತೆಯಿಂದ  ಚಾಚಾ  ನೆಹರೂ ಅವರ ಕನಸಿನಂತೆ  ಮಕ್ಕಳು ಉತ್ತಮ ಗುಣಮಟ್ಟದ  ಜೀವನ ನಡೆಸಲು ಅನುವಾಗುವಂತೆ ಮಾಡಬೇಕು. 
 

Friday 4 November 2011

ಕಾಪಿ (ನಕಲು), ragging ಮುಂತಾದ ಕೆಟ್ಟ ರೂಢಿಗಳಿಂದ ದೂರವಿರಿ !

ಕಾಪಿ ಮಾಡುವುದು ಒಂದು ರೀತಿಯಲ್ಲಿ ಕಳ್ಳತನ ಮತ್ತು ragging ಎಂದರೆ ಅಸುರೀ ಆನಂದಕ್ಕಾಗಿ ಮಾಡುವಂತಹ ವಿಕೃತ ಕೃತಿಗಳಾಗಿವೆ. ಮುಂದಿನ ಜೀವನದಲ್ಲಿ ಭ್ರಷ್ಟಾಚಾರಿ ಮತ್ತು ಅಪರಾಧಿಗಳಾಗುವ ಬೀಜವು ಇಂತಹ ಕೆಟ್ಟ ರೂಢಿಗಳಲ್ಲಿದೆ. ವಿದ್ಯಾರ್ಥಿ ಮಿತ್ರರೇ, ಶಿಕ್ಷಣ ಪಡೆಯುವ ಹಿಂದಿನ ಧ್ಯೇಯವು ಇದೇ ಆಗಿದೆಯೇನು? ನಾವು ಕೇವಲ ಹೊಟ್ಟೆಪಾಡಿಗಲ್ಲ,ಸದಾಚರಣೆ ಮತ್ತು ಸುಸಂಸ್ಕೃತರಾಗಲು ಶಿಕ್ಷಣವನ್ನು ಪಡೆಯಬೇಕಾಗಿದೆ. ragging ನಂತಹ ವಿಕೃತಿಗೆ ಸುಖವೆಂದು ತಿಳಿಯಬಾರದು, ಸಂಸ್ಕಾರ ಮತ್ತು ನೈತಿಕಮೌಲ್ಯಗಳ ಜೋಪಾಸನೆಯನ್ನು ಸುಖವೆಂದು ತಿಳಿದು ಜೀವನವನ್ನು ಸಾಗಿಸಬೇಕಾಗಿದೆ. ಧರ್ಮಶಿಕ್ಷಣದಿಂದಲೇ ನಾವು ಇಂತಹ ಜೀವನವನ್ನು ಸಾಗಿಸಬಲ್ಲೆವು.
ಕಾಪಿ, ragging ನಂತಹ ಶಬ್ದಗಳು ನಮ್ಮ ಭಾಷೆಯಲ್ಲಿಯೂ ಇಲ್ಲ. ಇದರಿಂದ ನಮ್ಮ ಹಿಂದೂ ಸಂಸ್ಕೃತಿಯು ಎಷ್ಟು ಶ್ರೇಷ್ಠವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ. ಈ ಶಬ್ದವನ್ನು ಶಿಕ್ಷಣಕ್ಷೇತ್ರದಿಂದ ಶಾಶ್ವತವಾಗಿ ನಾಶ ಮಾಡಬೇಕಾಗಿದ್ದಲ್ಲಿ ಧರ್ಮಾಧಿಷ್ಠಿತ ಶಿಕ್ಷಣಪದ್ಧತಿಯನ್ನೇ ಆಧರಿಸಬೇಕಾಗಿದೆ.

ಮಕ್ಕಳು ಶಿಕ್ಷಕರೊಂದಿಗೆ ಹೇಗೆ ವರ್ತಿಸಬೇಕು?

ವಿದ್ಯಾರ್ಥಿ ಮಿತ್ರರೇ, ನಮಗೆ ಆದರ್ಶವಾಗಿರುವವರು ಹಾಗೂ ಪ್ರತಿದಿನ ಹೊಸಹೊಸ ಜ್ಞಾನವನ್ನು ನೀಡುವವರೆಂದರೆ ಶಿಕ್ಷಕರು. ಶಿಕ್ಷಕರು ನಮಗಾಗಿ ತಮ್ಮ ತನು, ಮನದ ತ್ಯಾಗವನ್ನು ಮಾಡುತ್ತಾರೆ. ಅವರು ನಮಗೆ ಪ್ರತಿದಿನ ಜ್ಞಾನ ನೀಡಲು ಶ್ರಮಿಸುತ್ತಿರುತ್ತಾರೆ. ನಮಗಾಗಿ ಅವರು ಯಾವುದೇ ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಇಂತಹ ಶಿಕ್ಷಕರೊಂದಿಗೆ ನಮ್ಮ ವರ್ತನೆ ಹೇಗಿರಬೇಕು? ವಿದ್ಯಾರ್ಥಿ ಮಿತ್ರರೇ, ನಾವು ಅವರೊಂದಿಗೆ ಕೃತಜ್ಞತಾ ಭಾವದಿಂದ ವರ್ತಿಸಬೇಕು. ಅವರಿಂದಾಗಿ ನಮಗೆ ಜೀವನದ ದಿಕ್ಕು ಸಿಗುತ್ತದೆ. ನಮಗೆ ಬಾಲ್ಯಾವಸ್ಥೆಯಲ್ಲಿ ಸರಿ-ತಪ್ಪು ಯಾವುದೆಂದು ತಿಳಿಯುವುದಿಲ್ಲ. ಅದುದರಿಂದ ಶಿಕ್ಷಕರೇ ನಮಗೆ ಒಳ್ಳೆಯ ಅಂಶಗಳನ್ನು ತಿಳಿಸಿ ಹೇಳುತ್ತಾರೆ. ಇದನ್ನೆಲ್ಲ ಮಾಡುವಾಗ ಅವರು ಕೆಲವೊಮ್ಮೆ ನಮ್ಮ ಮೇಲೆ ಸಿಟ್ಟು ಮಾಡುತ್ತಾರೆ, ಕೆಲವೊಮ್ಮೆ ಹೊಡೆಯುತ್ತಾರೆ, ಕೆಲವೊಮ್ಮೆ ಬೈಯುತ್ತಾರೆ! ಆದರೆ ಇದರ ಅರ್ಥ ಅವರು ನಮ್ಮನ್ನು ಪ್ರೀತಿಸುವುದಿಲ್ಲವೆಂದಲ್ಲ. ‘ನೀವು ಒಳ್ಳೆಯ ಸಂಸ್ಕಾರವಂತ ಮತ್ತು ಜ್ಞಾನಿಯಾಗಬೇಕು’ ಎನ್ನುವುದು ಅವರ ಉದ್ದೇಶವಾಗಿರುತ್ತದೆ. ಒಳ್ಳೆಯ ಧ್ಯೇಯದಿಂದ ಅವರು ಕೆಲವೊಮ್ಮೆ ಕಠೋರವಾಗುತ್ತಾರೆ. ನಮಗೆ ಬಾಲ್ಯಾವಸ್ಥೆಯಲ್ಲಿ ಅದು ತಿಳಿಯುವುದಿಲ್ಲ. ಅದರಿಂದ ಕೆಲವು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಉದ್ಧಟತನದಿಂದ ವರ್ತಿಸುತ್ತಾರೆ. ಅವರಿಗೆ ಎದುರುತ್ತರ ನೀಡುತ್ತಾರೆ ಮತ್ತು ಅವರ ಮಾತನ್ನು ಕೇಳುವುದಿಲ್ಲ.
ಅಲ್ಲದೇ ಈಗಿನ ಕೆಲವು ಮಕ್ಕಳು ಶಿಕ್ಷಕರನ್ನು ಹಿಂದಿನಿಂದ ಅಣಕಿಸುತ್ತಾರೆ. ಶಿಕ್ಷಕರು ತರಗತಿಯಲ್ಲಿ ಕಲಿಸುತ್ತಿರುವಾಗ ಅವರಿಗೆ ಕೇಳಿಸದಂತೆ ತಮ್ಮೊಳಗೆ ಅವರ ಅಪಹಾಸ್ಯ ಮಾಡುತ್ತಾರೆ. ಇದರಿಂದ ಇತರ ಎಲ್ಲ ಮಕ್ಕಳೂ ಶಿಕ್ಷಕರನ್ನು ನೋಡಿ ನಗುತ್ತಾರೆ. ಇದೆಲ್ಲ ಅಯೋಗ್ಯವಾಗಿದೆ.

ಇಂದಿನ ಶಿಕ್ಷಣ ಎಷ್ಟು ಯೋಗ್ಯ, ಎಷ್ಟು ಅಯೋಗ್ಯ !

ಆಂಗ್ಲರು ನಮ್ಮ ಮೇಲೆ ಹೇರಿದ ಶಿಕ್ಷಣ ಪದ್ಧತಿಯನ್ನೇ ನಾವು ದೇಶ ಸ್ವಾತಂತ್ರ್ಯ ಪಡೆದ  ನಂತರ ಸಹ ಸ್ವೀಕರಿಸಿದ್ದೇವೆ. ಅದರಿಂದಾಗಿ ವಿದ್ಯಾರ್ಥಿಗಳ ಮೇಲೆ ಪ್ರಾಚೀನ ಭಾರತೀಯ ಸಂಸ್ಕೃತಿಗಿಂತ ವಿದೇಶಿ ಸಂಸ್ಕೃತಿಯೇ ಹೆಚ್ಚು ಪ್ರಮಾಣದಲ್ಲಿ ಪ್ರಭಾವ ಬೀರುತ್ತಿದೆ.  ಇಂದು ಜ್ಞಾನವೃದ್ಧಿಗಾಗಿ ಶಿಕ್ಷಣವೆಂಬ ಸಂಕಲ್ಪನೆಯು ಲೋಪವಾಗಿ ಕೇವಲ ಪರೀಕೆಯಲ್ಲಿ ಉತ್ತೀರ್ಣವಾಗುವುದಕ್ಕಾಗಿ ಮಾತ್ರ ಶಿಕ್ಷಣವಿದೆಯೆಂಬ ವ್ಯಾಖ್ಯೆ ನಿರ್ಮಾಣವಾಗಿದೆ. ಅದರ ಪರಿಣಾಮವೆಂದು ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ಮಾನಸಿಕ ವಿಕಾಸವು ಕುಂಟಿತವಾಗಿದೆ. ಆದುದರಿಂದ ಮಕ್ಕಳು ಚಿಕ್ಕಪುಟ್ಟ ಅಪಯಶಗಳಿಂದ ನಿರಾಶರಾಗಿ  ಆತ್ಮಹತ್ಯೆಯಂತಹ ಅಂತಿಮ ಮಾರ್ಗವನ್ನು ಅವಲಂಭಿಸುತ್ತಾರೆ. ಇಂದು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸವನ್ನು ಸಾಧಿಸುವುದಕ್ಕಾಗಿ ಪ್ರಾಚೀನ ಧರ್ಮಗ್ರಂಥಗಳನ್ನು ಆಧರಿಸಿರುವ ಶಿಕ್ಷಣ ಪದ್ಧತಿಯನ್ನು ನಿರ್ಮಾಣ ಮಾಡುವ ಅವಶ್ಯಕತೆಯುಂಟಾಗಿದೆ ಈ ಲೇಖನವು ಪ್ರಚಲಿತ ಶಿಕ್ಷಣ ಪದ್ಧತಿಯಲ್ಲಿನ ಕೊರತೆಗಳನ್ನು ತೋರಿಸುವುದಾಗಿದೆ !
ಗುರುಕುಲ ಪದ್ಧತಿ ಹೋಗಿ ಕುಲಗುರು ಪದ್ಧತಿ ಆರಂಭವಾಗುವುದು
ಶಿಕ್ಷಣವು ಇಂದು ಮಾತ್ರವಲ್ಲ ಅನಾದಿ ಕಾಲದಿಂದಲೂ ಮಾನವತೆಯನ್ನು ನಿರ್ಮಾಣ ಮಾಡುತ್ತಾ ಬಂದಿದೆ. ಶಿಕ್ಷಣದಿಂದ ಮನುಷ್ಯ ಜಾಣನಾಗುತ್ತಾನೆ, ವಿಚಾರವಂತನಾಗುತ್ತಾನೆ, ಸುಸಂಸ್ಕೃತನಾಗುತ್ತಾನೆ ಎಂದು ಹೇಳಲಾಗುತ್ತದೆ, ಆದರೆ ಇಂದು ಸಮಾಜದಲ್ಲಿ  ಅಂತಹ ಚಿತ್ರ ಕಾಣಿಸುವುದಿಲ್ಲ. ವಿದ್ಯಾರ್ಥಿ ಜ್ಞಾನಪಾರಾಯಣನಾಗಿರಬೇಕು. ಶಿಕ್ಷಕರು ವಿದ್ಯಾರ್ಥಿ ಪಾರಾಯಣ ಮತ್ತು ಜ್ಞಾನಪಾರಾಯಣರಾಗಿರಬೇಕೆಂಬ ಸಂಕೇತವಿದೆ. ಮೊದಲು ಗುರುಕುಲಗಳ ಪರಂಪರೆಯಿತ್ತು, ಈಗ ಕುಲಗುರು ಪದ್ಧತಿಯಿದೆ. ಶಿಕ್ಷಣ ಪದ್ಧತಿಯು ಬದಲಾಯಿತು. ಶಿಕ್ಷಣದ ಉದ್ಧೇಶ ಬದಲಾಯಿತು. ನಮ್ಮ ದೇಶದಲ್ಲಿ ಧ್ಯೇಯನಿಷ್ಟೆ, ಜೀವನನಿಷ್ಟೆ, ಸಂಸ್ಕೃತಿನಿಷ್ಟೆ ಮತ್ತು ಧರ್ಮನಿಷ್ಟೆ ನಿರ್ಮಾಣ ಮಾಡುವ ಶಿಕ್ಷಣವನ್ನು ನೀಡಲ್ಪಡುವುದಿಲ್ಲ. ಆದುದರಿಂದ ರಾಷ್ಟ್ರ ನಿಷ್ಟೆ ಹೇಗೆ ನಿರ್ಮಾಣವಾಗುವುದು’, ಎಂಬ ಪ್ರಶ್ನೆ ಎದುರಾಗಿದೆ.ಇಂದು ಅಧ್ಯಯನ ಮತ್ತು ಅಧ್ಯಾಪನವೆಂಬ ಶಬ್ಧವು ಶಬ್ಧಕೋಶದಲ್ಲಿಯೇ ಉಳಿದಿದೆ. ಜ್ಞಾನಮಂದಿರದೊಂದಿಗಿನ ಅದರ ಸಂಬಂಧವು ಮಾಯವಾಗಿದೆ.
ವಿದ್ಯಾರ್ಥಿಗಳ ವಿಕಾಸದ ದೃಷ್ಟಿಯಿಂದ ಅಬ್ಯಾಸಕ್ರಮ ಇಲ್ಲದಿರುವುದು
ಇಂದು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಗಾಗಿರುವ ಅಭ್ಯಾಸಕ್ರಮವು ಕಾಣುವುದಿಲ್ಲ. ವಿಧ್ಯಾರ್ಥಿಯನ್ನು ಜ್ಞಾನಪಾರಾಯಣ ಮತ್ತು ಗುರುಪಾರಾಯಣನನ್ನಾಗಿ ಮಾಡುವ ಶಿಕ್ಷಣ ಪದ್ಧತಿಯು ಇಂದು ಅಸ್ತಿತ್ವದಲ್ಲಿಲ್ಲ. ಅವನ ಗ್ರಹಣಶಕ್ತಿ, ವಾಚನ-ಕೌಶಲ್ಯ ಮತ್ತು ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಅವನ ಪದ್ಧತಿಯು ವಿಕಾಸವಾಗಬೇಕೆಂಬ ದೃಷ್ಟಿಯಿಂದ ಅಭ್ಯಾಸಕ್ರಮವನ್ನು ಅವಲಂಬಿಸುವುದಿಲ್ಲ.  ಈ ವಿಷಯಗಳ ಕಡೆಗೆ ಅವನ ಗಮನ ಹರಿಸಿ ಅವನನ್ನು ವೈಚಾರಿಕ ಹಾಗೂ ಬೌದ್ಧಿಕ ದೃಷ್ಟಿಯಿಂದ ಸಕ್ಷಮಗೊಳಿಸುವ ವ್ಯವಸ್ಥೆಯು ಶಿಕ್ಷಣ ಪದ್ಧತಿಯಲ್ಲಿಲ್ಲ.
ವಿದ್ಯಾರ್ಥಿಗಳ ಜ್ಞಾನವೃದ್ಧಿಯ ಕಡೆಗೆ ದುರ್ಲಕ್ಷ
ಇಂದು ವಾಚನ-ಸಂಸ್ಕೃತಿಯ ಮೇಲೆ ಬಹಳ ದೊಡ್ಡ ಸಂಕಟ ನಿರ್ಮಾಣವಾಗಿದೆ. ಮಕ್ಕಳು ಅಥವಾ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಓದುವುದಿಲ್ಲ. ಅವರು ಅವುಗಳನ್ನು ಓದಬೇಕೆಂಬುದಕ್ಕಾಗಿ ಶಿಕ್ಷಕರು ಹಾಗೂ ಪಾಲಕರು ಎಷ್ಟು ಪ್ರಯತ್ನ ಮಾಡುತ್ತಿದ್ದಾರೆಂಬುದು ಪ್ರಶ್ನೆಯಾಗಿದೆ. ಶಾಲೆಯಲ್ಲಿ ಯೋಗ್ಯ ರೀತಿಯಿಂದ ಮಾರ್ಗದರ್ಶನವಾಗುವುದಿಲ್ಲ ಹಾಗೂ ಅದು ಸಾಕಾಗುವುದಿಲ್ಲವೆಂದು ಪಾಲಕರಿಗನಿಸುತ್ತದೆ. ಆದುದರಿಂದ ಅವರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ವರ್ಗಗಳಿಗೆ ಸೇರಿಸುತ್ತಾರೆ. ಅಲ್ಲಿ ಸಹ ಆ ವಿದ್ಯಾರ್ಥಿಗಳಿಗೆ ಜ್ಞಾನಸಂಪಾದನೆಯ ಸಂಸ್ಕಾರವಾಗುವುದಿಲ್ಲ. ಅಲ್ಲಿ ಹೆಚ್ಚೆಚ್ಚು ಗುಣಗಳನ್ನು ಹೇಗೆ ಪಡೆಯುವುದೆಂಬ ಸಂಸ್ಕಾರವಾಗುತ್ತದೆ. ಈ ಶಿಕ್ಷಣವರ್ಗಗಳಲ್ಲಿ ವಿದ್ಯಾರ್ಥಿಗಳ ಕೈಗೆ ಪ್ರಶ್ನೋತ್ತರಗಳ ಪುಸ್ತಕವನ್ನು ನೀಡಲಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ತಯಾರು ಉತ್ತರಗಳ ಆಧಾರದಿಂದ ಗಿಳಿಬಾಯಿಪಾಟ ಮಾಡಿ ಅಂಕಗಳನ್ನು ಪಡೆಯುತ್ತಾರೆ ಹಾಗೂ ಉತ್ತೀರ್ಣರಾಗುತ್ತಾರೆ. ಇಂತಹ ವಿದ್ಯಾರ್ಥಿಗಳು ಎಷ್ಟು ಅಂಕಗಳನ್ನು ಪಡೆದರೂ ನಿಜವಾಗಿ ನೋಡಿದರೆ ಅವರು ಜ್ಞಾನಿಗಳೆಂದು ಹೇಳಲು ಸಾಧ್ಯವಿಲ್ಲ, ಕಾರಣ ತಯಾರಿಸಿ ಕೊಟ್ಟಿರುವ ಪ್ರಶ್ನೋತ್ತರ ಪುಸ್ತಕಗಳಿಂದ ಜ್ಞಾನವೃದ್ಧಿಯಾಗುವುಲ್ಲ. ಜ್ಞಾನವೃದ್ಧಿಯ ಮಾರ್ಗವು ಕಠಿಣವಾಗಿದೆ. ಅದಕ್ಕಾಗಿ ವಾಚನ, ಚಿಂತನ ಮತ್ತು ಮನನ ಈ ಮಾಧ್ಯಮದಿಂದ ವಿಚಾರಶಕ್ತಿಯನ್ನು ಸಕ್ಷಮಗೊಳಿಸಬೇಕಾಗುತ್ತದೆ. ಗ್ರಹಣಶಕ್ತಿ ವೃದ್ಧಿಗೊಳಿಸಲಿಕ್ಕಾಗಿ ಪಠ್ಯಪುಸ್ತಕಗಳ ವಾಚನದೊಂದಿಗೆ ಇತರ ಪುಸ್ತಕಗಳ ಅಭ್ಯಾಸವೂ ಅಷ್ಟೇ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ವಾಚನದ ರುಚಿ ನಿರ್ಮಾಣವಾಗ ಬೇಕು, ಅವರ ಲೇಖನ ಕೌಶಲ್ಯ ಹೆಚ್ಚಾಗಬೇಕು, ತಿಳಿದುಕೊಂಡಿರುವ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಯೋಗ್ಯ ಶಬ್ಧಗಳಲ್ಲಿ ಹಾಗೂ ಯೋಗ್ಯ ಪದ್ಧತಿಯಲ್ಲಿ ಸ್ವಭಾಷೆಯಲ್ಲಿ ಬರೆಯಲು ಬರಬೇಕೆಂದು ಒತ್ತಾಯ ಪಡಿಸುವ ಶಿಕ್ಷಣ ವರ್ಗಗಳಿಲ್ಲ, ಅಂತಹ ಶಿಕ್ಷಣ ವ್ಯವಸ್ಥೆಯೂ ಇಲ್ಲ!
ಬೌದ್ಧಿಕ ಕ್ಷಮತೆಯ ಅಭಾವ
ಇಂದಿನ ಶಿಕ್ಷಣಪದ್ಧತಿಯಲ್ಲಿ ಆಂಗ್ಲ, ಗಣಿತ ಮತ್ತು ವಿಜ್ಞಾನ ಇವುಗಳಿಗೆ ಮಾತ್ರ ಮಹತ್ವ ನೀಡಲಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಇತರ ವಿಷಯಗಳನ್ನು ದುರ್ಲಕಿಸುವ ಪ್ರವೃತ್ತಿ ನಿರ್ಮಾಣವಾಗಿದೆ. ಗುಣಗಳ ಮೊತ್ತ (ಶೇಕಡಾ) ಹೆಚ್ಚಿಸುವ ಧ್ಯೇಯ ಮತ್ತು ಉದ್ಧೇಶವನ್ನು ವಿದ್ಯಾರ್ಥಿಗಳ ಮುಂದೆ ಇಡಲಾಗುತ್ತದೆ. ಇಂದು ವಿದ್ಯಾರ್ಥಿಗಳ ಭಾಷೆ ಸಕ್ಷಮವಾಗಿಲ್ಲ. ಭಾಷೆಯ ಮೇಲೆ ಪ್ರಭುತ್ವವಿಲ್ಲದ ಕಾರಣ ಆ ಭಾಷೆಯಲ್ಲಿನ ಜ್ಞಾನ ಸಂಪಾದನೆ ಮಾಡಲಿಕ್ಕಾಗಿ ಬೇಕಾಗುವ ಬೌದ್ಧಿಕ ಕ್ಷಮತೆಯು ವಿದ್ಯಾರ್ಥಿಗಳಲ್ಲಿಲ್ಲ.

ಮಕ್ಕಳೇ, ಓದುವಾಗ ತೆಗೆದುಕೊಳ್ಳಬೇಕಾದ ಜಾಗೃತೆ!



  • ಯಾವಾಗಲೂ ನೆಟ್ಟಗೆ ಕುಳಿತುಕೊಂಡು ಓದಬೇಕು. ಓದುವಾಗ ಮೇಜು ಹಾಗೂ ಕುರ್ಚಿ ಸ್ಥಿರವಾಗಿರಬೇಕು ಹಾಗೂ ಪುಸ್ತಕ ಮತ್ತು ಕಣ್ಣು ಇವುಗಳಲ್ಲಿನ ಅಂತರ ೩೦ ರಿಂದ ೩೫ ಸೆ.ಮಿ.ನಷ್ಟಿರಬೇಕು. ಓದುವ ಕೋಣೆಯಲ್ಲಿ ಸರಿಯಾಗಿ ಬೆಳಕಿರಬೇಕು. ಸಾಧ್ಯವಿದ್ದರೆ ಪುಸ್ತಕದ ಮೇಲೆ ಹಿಂದಿನಿಂದ ಅಥವಾ ಎಡ ಬದಿಯಿಂದ ಬೆಳಕು ಬೀಳಬೇಕು. ಅಂದರೆ ಪುಸ್ತಕ ಎಡ ಕೈಯಲ್ಲಿ ಹಿಡಿದು ಓದುವಾಗ ಬೆರಳುಗಳ ನೆರಳು ಬೀಳ ಬಾರದು.
  • ಓದುವಾಗ ಮಧ್ಯ-ಮಧ್ಯದಲ್ಲಿ ಕಣ್ಣು ಮುಚ್ಚ ಬೇಕು. ವಾಚನ ಹಾಗೂ ಬೆರಳಚ್ಚು, ಚಿತ್ರ ಬಿಡಿಸುವುದು, ಹೊಲಿಗೆ ಇತ್ಯಾದಿ ಹೆಚ್ಚು ಸಮಯ ಮಾಡಬೇಕಿದ್ದರೆ ಪ್ರತಿ ೧೫-೨೦ ನಿಮಿಷಕ್ಕೊಮ್ಮೆ ಸ್ವಲ್ಪ ಸಮಯ ನಿಲ್ಲಿಸಿ ೧-೨ ನಿಮಿಷ ಕಣ್ಣು ಮುಚ್ಚಿಕೊಳ್ಳಬೇಕು ಮತ್ತು ಯಾವುದಾದರೂ ವಸ್ತುವನ್ನು ನೋಡಿ ಧ್ಯಾನ ಮಾಡಬೇಕು ಅಥವಾ ದೂರದ ಯಾವುದಾದರೂ ವಸ್ತುವಿನ ಮೇಲೆ ದೃಷ್ಟಿ ಸ್ಥಿರಗೊಳಿಸಬೇಕು.

ಮಕ್ಕಳ ಭಯವನ್ನು ಹೇಗೆ ತೆಗೆಯಬೇಕು ?

ಭೀತಿ : "ಭಯದಿಂದಾಗಿ ಮನುಷ್ಯನು ಗಂಡಾಂತರದ ಪ್ರಸಂಗದಿಂದ ದೂರ ಓಡುತ್ತಾನೆ. ಬೆಂಕಿ ಅಥವಾ ಗೂಂಡಾಗಳಿಂದ ಅವನು ದೂರ ಓಡುತ್ತಾನೆ, ಆ ಸಮಯದಲ್ಲಿ ಅವನ ಭಯವು ಯೋಗ್ಯವಾಗಿರುತ್ತದೆ, ಆದರೆ ಕಾಲ್ಪನಿಕ ಕತೆಗಳು, ಅದರಂತೆಯೇ ಕತ್ತಲೆ, ಜಿರಲೆ ಇತ್ಯಾದಿ ವಿಷಯಗಳ ಭಯವು ಅಯೋಗ್ಯವಾಗಿರುತ್ತದೆ. ಭಯವನ್ನು ಹೋಗಲಾಡಿಸಲು ಉಪಾಯ ಯೋಜನೆಯನ್ನು ಮಾಡಲಾಗುತ್ತದೆ.
ಭಯವನ್ನು ಹೇಗೆ ಹೋಗಲಾಡಿಸಬೇಕು ?
೧. ರಾತ್ರಿಯ ವೇಳೆಯಲ್ಲಿ ಕತ್ತಲೆಯಿಂದಾಗಿ ಮಗುವು ಮೂತ್ರವಿಸರ್ಜನೆಗೆ ಹೋಗಲು ಭಯಪಡುತ್ತಿರುವುದಾದರೆ, ಅಲ್ಲಿ ದೀಪವನ್ನು ಉರಿಸಿರಬೇಕು.
೨. ಅನೇಕ ವೇಳೆ ಗಮನಕ್ಕೆ ಬರುವುದೆಂದರೆ, ಹಾರುವ ಜಿರಲೆಯು ಕೋಣೆಯಲ್ಲಿ ಕಂಡುಬಂದರೆ ತಾಯಿಯೇ ಗಾಬರಿಯಾಗಿ ಅಂಜಿಕೆಯಿಂದ ಹಾರುತ್ತಾಳೆ. ಅಂತಹ ತಾಯಿಯ ಮಕ್ಕಳು ಸಹಜವಾಗಿ ಜಿರಲೆಗಳಿಗೆ ಹೆದರುತ್ತಾರೆ. ಆದುದರಿಂದ ಮಕ್ಕಳೆದುರು ತಾಯಿಯು ಅಂಜದೇ ಸ್ಥಿರವಾಗಿರಬೇಕು.
೩. ಭಯವು ಗಂಡಾಂತರಕಾರಿ ಪ್ರಸಂಗದಿಂದ ನಿರ್ಮಾಣವಾದರೆ ಅಂತಹ ಪ್ರಸಂಗಗಳನ್ನು ತಪ್ಪಿಸಲು ಪ್ರಯತ್ನಿಸಬೇಕು.
ಉದಾ. ಒಂದುವೇಳೆ ರೌಡಿಯು ಶಾಲೆಯ ದಾರಿಯಲ್ಲಿ ತೊಂದರೆಯನ್ನು ಕೊಡುತ್ತಿದ್ದಲ್ಲಿ, ಶಾಲೆಯ ಮಾರ್ಗವನ್ನು ತಪ್ಪಿಸುವುದು ಅವಶ್ಯವಿರುತ್ತದೆ.
೪. ಯಾವುದಾದರೊಂದು ಪ್ರಸಂಗವನ್ನು ತಪ್ಪಿಸಲು ಸಾಧ್ಯವಿಲ್ಲದಿದ್ದಲ್ಲಿ, ಉದಾ. ಒಬ್ಬ ವ್ಯಕ್ತಿಗೆ ಅಸಾಧ್ಯ ರೋಗವಾಗಿದ್ದಲ್ಲಿ, ಅವನು ತತ್ತ್ವಜ್ಞಾನದ ಅಭ್ಯಾಸವನ್ನು ಮಾಡಬೇಕು. "ಪ್ರತಿಯೊಂದು ರೋಗವು ನಾವೇ ಹಿಂದೆ ಮಾಡಿದ ಪಾಪಕರ್ಮದ ಫಲವೆಂದು  ನಾವು ಭೋಗಿಸುತ್ತಿದ್ದೇವೆ", ಎಂದು ನಿಶ್ಚಯವಾದ ಮೇಲೆ ನಮ್ಮ ಪಾಪದಿಂದ ಮುಕ್ತರಾಗಲು ಆ ರೋಗವನ್ನು ಆನಂದದಿಂದ ಸ್ವೀಕಾರ ಮಾಡಬಹುದು.
೫. "ದೇಹ ನಶ್ವರವಾಗಿರುವುದರಿಂದ ಮೃತ್ಯುವನ್ನು ಯಾರಿಗೂ ತಪ್ಪಿಸಲಾಗುವುದಿಲ್ಲ ಮತ್ತು ಪ್ರತಿಯೊಬ್ಬನ ಆತ್ಮವು ಅಮರವಾಗಿರುವುದರಿಂದ ಮೃತ್ಯುವಿನ ವಿಷಯದಲ್ಲಿ ಭಯ ಪಟ್ಟುಕೊಳ್ಳುವ ಕಾರಣವೇ ಇಲ್ಲ", ಎಂದೂ ಸಹ ಮನಸ್ಸಿನ ಮೇಲೆ ಬಿಂಬಿಸಬೇಕು.
ಶರೀರದಿಂದ ಮತ್ತು ಮನಸ್ಸಿನಿಂದ ದುರ್ಬಲವಾಗಿರುವ ಜನರೇ ಪುಕ್ಕಲುಗಳಿರುತ್ತಾರೆ. "ಹೆದರುವವನ ಹಿಂದೆ ಬ್ರಹ್ಮರಾಕ್ಷಸ" ಎಂಬ ಗಾದೆಯು ಎಲ್ಲರಿಗೂ ತಿಳಿದೇ ಇದೆ. ಭಗತಸಿಂಗ, ಸ್ವಾತಂತ್ರ ವೀರ ಸಾವರಕರ ಮುಂತಾದ ದೇಶಭಕ್ತರು ನಿರ್ದಾಕ್ಷಿಣ್ಯವಾಗಿ ಮತ್ತು ಮೃತ್ಯುವಿಗೆ ಹೆದರದೇ ಕ್ರೂರ ಬ್ರಿಟಿಷ ಸರಕಾರದ ವಿರುದ್ಧ ಎದ್ದು ನಿಂತರು. ಅವರ ತ್ಯಾಗದ ಫಲವನ್ನು ಇಂದು ನಾವು ಉಪಭೋಗಿಸುತ್ತಿದ್ದೇವೆ.
ಉಪನಿಷತ್ತಿನಲ್ಲಿ ಹೇಳಿದಂತೆ, "ಬೇರೆಯವರೊಂದಿಗೆ ನಮ್ಮ ಸಂಪರ್ಕ ಬಂದ ನಂತರ ಅವನು ನಮಗೆ ಮೋಸಗೊಳಿಸಬಹುದೋ ಹೇಗೆ, ಎಂಬ ಭಯವು ನಮಗೆ ಸತತವಾಗಿ ಇದ್ದೇ ಇರುತ್ತದೆ. ಆದುದರಿಂದಲೇ ಸಾಧುಸಂತರು ಹೇಳಿದಂತೆ ಸಮದೃಷ್ಟಿಯಾದ ನಂತರ, ಎಂದರೆ "ಎಲ್ಲೆಡೆಯಲ್ಲಿಯೂ ನಾನು ನೀನೆಂಬ ಭೇದವಿಲ್ಲ",ಎಂಬ ಅವಸ್ಥೆಯು ಪ್ರಾಪ್ತವಾದ ನಂತರ ತನ್ನಷ್ಟಕ್ಕೆ ತಾನೇ ಭಯದ ಲವಲೇಶವೂ ಇರುವುದಿಲ್ಲ."
- ಡಾ.ವಸಂತ ಬಾಳಾಜಿ ಆಠವಲೆ, ಚಿಕ್ಕಮಕ್ಕಳ ತಜ್ಞರು (ಕ್ರಿ.ಶ.೧೯೯೦)