Friday 4 November 2011

ಇಂದಿನ ಶಿಕ್ಷಣ ಎಷ್ಟು ಯೋಗ್ಯ, ಎಷ್ಟು ಅಯೋಗ್ಯ !

ಆಂಗ್ಲರು ನಮ್ಮ ಮೇಲೆ ಹೇರಿದ ಶಿಕ್ಷಣ ಪದ್ಧತಿಯನ್ನೇ ನಾವು ದೇಶ ಸ್ವಾತಂತ್ರ್ಯ ಪಡೆದ  ನಂತರ ಸಹ ಸ್ವೀಕರಿಸಿದ್ದೇವೆ. ಅದರಿಂದಾಗಿ ವಿದ್ಯಾರ್ಥಿಗಳ ಮೇಲೆ ಪ್ರಾಚೀನ ಭಾರತೀಯ ಸಂಸ್ಕೃತಿಗಿಂತ ವಿದೇಶಿ ಸಂಸ್ಕೃತಿಯೇ ಹೆಚ್ಚು ಪ್ರಮಾಣದಲ್ಲಿ ಪ್ರಭಾವ ಬೀರುತ್ತಿದೆ.  ಇಂದು ಜ್ಞಾನವೃದ್ಧಿಗಾಗಿ ಶಿಕ್ಷಣವೆಂಬ ಸಂಕಲ್ಪನೆಯು ಲೋಪವಾಗಿ ಕೇವಲ ಪರೀಕೆಯಲ್ಲಿ ಉತ್ತೀರ್ಣವಾಗುವುದಕ್ಕಾಗಿ ಮಾತ್ರ ಶಿಕ್ಷಣವಿದೆಯೆಂಬ ವ್ಯಾಖ್ಯೆ ನಿರ್ಮಾಣವಾಗಿದೆ. ಅದರ ಪರಿಣಾಮವೆಂದು ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ಮಾನಸಿಕ ವಿಕಾಸವು ಕುಂಟಿತವಾಗಿದೆ. ಆದುದರಿಂದ ಮಕ್ಕಳು ಚಿಕ್ಕಪುಟ್ಟ ಅಪಯಶಗಳಿಂದ ನಿರಾಶರಾಗಿ  ಆತ್ಮಹತ್ಯೆಯಂತಹ ಅಂತಿಮ ಮಾರ್ಗವನ್ನು ಅವಲಂಭಿಸುತ್ತಾರೆ. ಇಂದು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸವನ್ನು ಸಾಧಿಸುವುದಕ್ಕಾಗಿ ಪ್ರಾಚೀನ ಧರ್ಮಗ್ರಂಥಗಳನ್ನು ಆಧರಿಸಿರುವ ಶಿಕ್ಷಣ ಪದ್ಧತಿಯನ್ನು ನಿರ್ಮಾಣ ಮಾಡುವ ಅವಶ್ಯಕತೆಯುಂಟಾಗಿದೆ ಈ ಲೇಖನವು ಪ್ರಚಲಿತ ಶಿಕ್ಷಣ ಪದ್ಧತಿಯಲ್ಲಿನ ಕೊರತೆಗಳನ್ನು ತೋರಿಸುವುದಾಗಿದೆ !
ಗುರುಕುಲ ಪದ್ಧತಿ ಹೋಗಿ ಕುಲಗುರು ಪದ್ಧತಿ ಆರಂಭವಾಗುವುದು
ಶಿಕ್ಷಣವು ಇಂದು ಮಾತ್ರವಲ್ಲ ಅನಾದಿ ಕಾಲದಿಂದಲೂ ಮಾನವತೆಯನ್ನು ನಿರ್ಮಾಣ ಮಾಡುತ್ತಾ ಬಂದಿದೆ. ಶಿಕ್ಷಣದಿಂದ ಮನುಷ್ಯ ಜಾಣನಾಗುತ್ತಾನೆ, ವಿಚಾರವಂತನಾಗುತ್ತಾನೆ, ಸುಸಂಸ್ಕೃತನಾಗುತ್ತಾನೆ ಎಂದು ಹೇಳಲಾಗುತ್ತದೆ, ಆದರೆ ಇಂದು ಸಮಾಜದಲ್ಲಿ  ಅಂತಹ ಚಿತ್ರ ಕಾಣಿಸುವುದಿಲ್ಲ. ವಿದ್ಯಾರ್ಥಿ ಜ್ಞಾನಪಾರಾಯಣನಾಗಿರಬೇಕು. ಶಿಕ್ಷಕರು ವಿದ್ಯಾರ್ಥಿ ಪಾರಾಯಣ ಮತ್ತು ಜ್ಞಾನಪಾರಾಯಣರಾಗಿರಬೇಕೆಂಬ ಸಂಕೇತವಿದೆ. ಮೊದಲು ಗುರುಕುಲಗಳ ಪರಂಪರೆಯಿತ್ತು, ಈಗ ಕುಲಗುರು ಪದ್ಧತಿಯಿದೆ. ಶಿಕ್ಷಣ ಪದ್ಧತಿಯು ಬದಲಾಯಿತು. ಶಿಕ್ಷಣದ ಉದ್ಧೇಶ ಬದಲಾಯಿತು. ನಮ್ಮ ದೇಶದಲ್ಲಿ ಧ್ಯೇಯನಿಷ್ಟೆ, ಜೀವನನಿಷ್ಟೆ, ಸಂಸ್ಕೃತಿನಿಷ್ಟೆ ಮತ್ತು ಧರ್ಮನಿಷ್ಟೆ ನಿರ್ಮಾಣ ಮಾಡುವ ಶಿಕ್ಷಣವನ್ನು ನೀಡಲ್ಪಡುವುದಿಲ್ಲ. ಆದುದರಿಂದ ರಾಷ್ಟ್ರ ನಿಷ್ಟೆ ಹೇಗೆ ನಿರ್ಮಾಣವಾಗುವುದು’, ಎಂಬ ಪ್ರಶ್ನೆ ಎದುರಾಗಿದೆ.ಇಂದು ಅಧ್ಯಯನ ಮತ್ತು ಅಧ್ಯಾಪನವೆಂಬ ಶಬ್ಧವು ಶಬ್ಧಕೋಶದಲ್ಲಿಯೇ ಉಳಿದಿದೆ. ಜ್ಞಾನಮಂದಿರದೊಂದಿಗಿನ ಅದರ ಸಂಬಂಧವು ಮಾಯವಾಗಿದೆ.
ವಿದ್ಯಾರ್ಥಿಗಳ ವಿಕಾಸದ ದೃಷ್ಟಿಯಿಂದ ಅಬ್ಯಾಸಕ್ರಮ ಇಲ್ಲದಿರುವುದು
ಇಂದು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಗಾಗಿರುವ ಅಭ್ಯಾಸಕ್ರಮವು ಕಾಣುವುದಿಲ್ಲ. ವಿಧ್ಯಾರ್ಥಿಯನ್ನು ಜ್ಞಾನಪಾರಾಯಣ ಮತ್ತು ಗುರುಪಾರಾಯಣನನ್ನಾಗಿ ಮಾಡುವ ಶಿಕ್ಷಣ ಪದ್ಧತಿಯು ಇಂದು ಅಸ್ತಿತ್ವದಲ್ಲಿಲ್ಲ. ಅವನ ಗ್ರಹಣಶಕ್ತಿ, ವಾಚನ-ಕೌಶಲ್ಯ ಮತ್ತು ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಅವನ ಪದ್ಧತಿಯು ವಿಕಾಸವಾಗಬೇಕೆಂಬ ದೃಷ್ಟಿಯಿಂದ ಅಭ್ಯಾಸಕ್ರಮವನ್ನು ಅವಲಂಬಿಸುವುದಿಲ್ಲ.  ಈ ವಿಷಯಗಳ ಕಡೆಗೆ ಅವನ ಗಮನ ಹರಿಸಿ ಅವನನ್ನು ವೈಚಾರಿಕ ಹಾಗೂ ಬೌದ್ಧಿಕ ದೃಷ್ಟಿಯಿಂದ ಸಕ್ಷಮಗೊಳಿಸುವ ವ್ಯವಸ್ಥೆಯು ಶಿಕ್ಷಣ ಪದ್ಧತಿಯಲ್ಲಿಲ್ಲ.
ವಿದ್ಯಾರ್ಥಿಗಳ ಜ್ಞಾನವೃದ್ಧಿಯ ಕಡೆಗೆ ದುರ್ಲಕ್ಷ
ಇಂದು ವಾಚನ-ಸಂಸ್ಕೃತಿಯ ಮೇಲೆ ಬಹಳ ದೊಡ್ಡ ಸಂಕಟ ನಿರ್ಮಾಣವಾಗಿದೆ. ಮಕ್ಕಳು ಅಥವಾ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಓದುವುದಿಲ್ಲ. ಅವರು ಅವುಗಳನ್ನು ಓದಬೇಕೆಂಬುದಕ್ಕಾಗಿ ಶಿಕ್ಷಕರು ಹಾಗೂ ಪಾಲಕರು ಎಷ್ಟು ಪ್ರಯತ್ನ ಮಾಡುತ್ತಿದ್ದಾರೆಂಬುದು ಪ್ರಶ್ನೆಯಾಗಿದೆ. ಶಾಲೆಯಲ್ಲಿ ಯೋಗ್ಯ ರೀತಿಯಿಂದ ಮಾರ್ಗದರ್ಶನವಾಗುವುದಿಲ್ಲ ಹಾಗೂ ಅದು ಸಾಕಾಗುವುದಿಲ್ಲವೆಂದು ಪಾಲಕರಿಗನಿಸುತ್ತದೆ. ಆದುದರಿಂದ ಅವರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ವರ್ಗಗಳಿಗೆ ಸೇರಿಸುತ್ತಾರೆ. ಅಲ್ಲಿ ಸಹ ಆ ವಿದ್ಯಾರ್ಥಿಗಳಿಗೆ ಜ್ಞಾನಸಂಪಾದನೆಯ ಸಂಸ್ಕಾರವಾಗುವುದಿಲ್ಲ. ಅಲ್ಲಿ ಹೆಚ್ಚೆಚ್ಚು ಗುಣಗಳನ್ನು ಹೇಗೆ ಪಡೆಯುವುದೆಂಬ ಸಂಸ್ಕಾರವಾಗುತ್ತದೆ. ಈ ಶಿಕ್ಷಣವರ್ಗಗಳಲ್ಲಿ ವಿದ್ಯಾರ್ಥಿಗಳ ಕೈಗೆ ಪ್ರಶ್ನೋತ್ತರಗಳ ಪುಸ್ತಕವನ್ನು ನೀಡಲಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ತಯಾರು ಉತ್ತರಗಳ ಆಧಾರದಿಂದ ಗಿಳಿಬಾಯಿಪಾಟ ಮಾಡಿ ಅಂಕಗಳನ್ನು ಪಡೆಯುತ್ತಾರೆ ಹಾಗೂ ಉತ್ತೀರ್ಣರಾಗುತ್ತಾರೆ. ಇಂತಹ ವಿದ್ಯಾರ್ಥಿಗಳು ಎಷ್ಟು ಅಂಕಗಳನ್ನು ಪಡೆದರೂ ನಿಜವಾಗಿ ನೋಡಿದರೆ ಅವರು ಜ್ಞಾನಿಗಳೆಂದು ಹೇಳಲು ಸಾಧ್ಯವಿಲ್ಲ, ಕಾರಣ ತಯಾರಿಸಿ ಕೊಟ್ಟಿರುವ ಪ್ರಶ್ನೋತ್ತರ ಪುಸ್ತಕಗಳಿಂದ ಜ್ಞಾನವೃದ್ಧಿಯಾಗುವುಲ್ಲ. ಜ್ಞಾನವೃದ್ಧಿಯ ಮಾರ್ಗವು ಕಠಿಣವಾಗಿದೆ. ಅದಕ್ಕಾಗಿ ವಾಚನ, ಚಿಂತನ ಮತ್ತು ಮನನ ಈ ಮಾಧ್ಯಮದಿಂದ ವಿಚಾರಶಕ್ತಿಯನ್ನು ಸಕ್ಷಮಗೊಳಿಸಬೇಕಾಗುತ್ತದೆ. ಗ್ರಹಣಶಕ್ತಿ ವೃದ್ಧಿಗೊಳಿಸಲಿಕ್ಕಾಗಿ ಪಠ್ಯಪುಸ್ತಕಗಳ ವಾಚನದೊಂದಿಗೆ ಇತರ ಪುಸ್ತಕಗಳ ಅಭ್ಯಾಸವೂ ಅಷ್ಟೇ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ವಾಚನದ ರುಚಿ ನಿರ್ಮಾಣವಾಗ ಬೇಕು, ಅವರ ಲೇಖನ ಕೌಶಲ್ಯ ಹೆಚ್ಚಾಗಬೇಕು, ತಿಳಿದುಕೊಂಡಿರುವ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಯೋಗ್ಯ ಶಬ್ಧಗಳಲ್ಲಿ ಹಾಗೂ ಯೋಗ್ಯ ಪದ್ಧತಿಯಲ್ಲಿ ಸ್ವಭಾಷೆಯಲ್ಲಿ ಬರೆಯಲು ಬರಬೇಕೆಂದು ಒತ್ತಾಯ ಪಡಿಸುವ ಶಿಕ್ಷಣ ವರ್ಗಗಳಿಲ್ಲ, ಅಂತಹ ಶಿಕ್ಷಣ ವ್ಯವಸ್ಥೆಯೂ ಇಲ್ಲ!
ಬೌದ್ಧಿಕ ಕ್ಷಮತೆಯ ಅಭಾವ
ಇಂದಿನ ಶಿಕ್ಷಣಪದ್ಧತಿಯಲ್ಲಿ ಆಂಗ್ಲ, ಗಣಿತ ಮತ್ತು ವಿಜ್ಞಾನ ಇವುಗಳಿಗೆ ಮಾತ್ರ ಮಹತ್ವ ನೀಡಲಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಇತರ ವಿಷಯಗಳನ್ನು ದುರ್ಲಕಿಸುವ ಪ್ರವೃತ್ತಿ ನಿರ್ಮಾಣವಾಗಿದೆ. ಗುಣಗಳ ಮೊತ್ತ (ಶೇಕಡಾ) ಹೆಚ್ಚಿಸುವ ಧ್ಯೇಯ ಮತ್ತು ಉದ್ಧೇಶವನ್ನು ವಿದ್ಯಾರ್ಥಿಗಳ ಮುಂದೆ ಇಡಲಾಗುತ್ತದೆ. ಇಂದು ವಿದ್ಯಾರ್ಥಿಗಳ ಭಾಷೆ ಸಕ್ಷಮವಾಗಿಲ್ಲ. ಭಾಷೆಯ ಮೇಲೆ ಪ್ರಭುತ್ವವಿಲ್ಲದ ಕಾರಣ ಆ ಭಾಷೆಯಲ್ಲಿನ ಜ್ಞಾನ ಸಂಪಾದನೆ ಮಾಡಲಿಕ್ಕಾಗಿ ಬೇಕಾಗುವ ಬೌದ್ಧಿಕ ಕ್ಷಮತೆಯು ವಿದ್ಯಾರ್ಥಿಗಳಲ್ಲಿಲ್ಲ.

No comments:

Post a Comment