Sunday 29 May 2011

ಮಕ್ಕಳಿಗೆ ಯಾವಾಗ ಪ್ರತ್ಯೇಕ ಕೋಣೆ ನೀಡುವಿರಿ?

"ಅಮ್ಮನ ಅಪ್ಪಿಕೊಂಡು ಮಲಗಿದರೆ ಮಾತ್ರ 9 ವರ್ಷದ ಮಗಳಿಗೆ ನಿದ್ದೆ ಬರೋದು, ಅವನಂತೂ ಹತ್ತು ವರ್ಷವಾದರೂ ಅಪ್ಪನೊಂದಿಗೆ ಮಲಗುತ್ತಾನೆ". ಮಕ್ಕಳಿಗೆ ಪ್ರತ್ಯೇಕವಾಗಿ ರೂಮ್ ನೀಡದೆ ಇದ್ದರೆ ಇಂತಹ ಮಾತುಗಳು ಕೇಳಿ ಬರುತ್ತಿರುತ್ತವೆ.

ಮಕ್ಕಳಿಗೆ ಪ್ರತ್ಯೇಕ ರೂಮಾ? ನಮ್ಮ ಜೊತೆಯಲ್ಲಿಯೇ ಇರಲಿ. ಸದಾ ನಮ್ಮ ಸಾಮೀಪ್ಯ ದೊರಕಲಿ. ಅಂತ ನೀವು ಬಯಸಬಹುದು. ಆದರೆ ನೀವು ನಿಧಾನವಾಗಿ ನಿಮ್ಮ ಮಕ್ಕಳ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದ್ದೀರಿ ಎಂಬ ಅರಿವಿರಲಿ.

ಮಕ್ಕಳ ಸ್ವಾತಂತ್ರ್ಯಕ್ಕೆ ಯಾಕೆ ಅಡ್ಡಿಬರಬೇಕು ಅಲ್ವೇ? ಒಂದಿಷ್ಟು ವಯಸ್ಸಾದಂತೆ ಅವರಿಗೊಂದು ಕೋಣೆ ಕೊಟ್ಟುಬಿಡಿ.

* ಸ್ವತಂತ್ರವಾಗಿ ಬದುಕಲು ಮಕ್ಕಳು ಸಜ್ಜಾಗಬೇಕೆಂದರೆ ಅವರಿಗೆ ಪ್ರತ್ಯೇಕವಾಗಿ ವಾಸಿಸಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಹಾಸ್ಟೇಲ್, ಮನೆಬಿಟ್ಟು ದೂರದಲ್ಲಿ ವಾಸಿಸುವ ಸಂದರ್ಭದಲ್ಲಿ ಅವರಿಗೆ ಕಷ್ಟವಾದೀತು.

* 5 ವರ್ಷ ಕಳೆದ ಮಕ್ಕಳು ಪ್ರತ್ಯೇಕ ಕೋಣೆಯಲ್ಲಿ ನಿದ್ದೆ ಮಾಡಲು ಶಕ್ತರು. ಇಷ್ಟು ವಯಸ್ಸು ಆದ ನಂತರ ಮಕ್ಕಳನ್ನು ಪ್ರತ್ಯೇಕ ಕೋಣೆಯಲ್ಲಿ ವಾಸಿಸಲು ಪೋಷಕರು ಪ್ರೋತ್ಸಾಹಿಸಬೇಕು.

* ಕೆಲವು ಮಕ್ಕಳು ಪ್ರತ್ಯೇಕವಾಗಿ ಮಲಗುತ್ತೇನೆ ಎಂಬ ಸೂಚನೆ ನೀಡುತ್ತಾರೆ. ಯಾಕೆ ಅಂತ ಕೇಳಿ. ಅವರೇನಾದರೂ ಕಾರಣ ನೀಡಬಹುದು. ಒಳ್ಳೆಯ ಪೋಷಕರಾಗಿ ಅವರ ಆ ಕೋರಿಕೆ ಈಡೇರಿಸಿಬಿಡಿ. 

* ನಿಮಗೆ ಇಬ್ಬರು ಮಕ್ಕಳಿದ್ದರೆ ಅವರನ್ನು ಒಂದೇ ಕೋಣೆಯಲ್ಲಿ ವಾಸಿಸಲು ಹೇಳಿರಿ.

ಮಕ್ಕಳು ಪ್ರತ್ಯೇಕ ಕೋಣೆ ಬಯಸಿದರೆ ಅದನ್ನು ನೀಡಿ. ಹಾಗೇ ಅಲ್ಲಿ ಅವರಿಗೆ ಬದುಕಿನ ಪಾಠಗಳನ್ನು ಹೇಳಿ ಕೊಡಬಹುದು. ಅವರ ಅಭಿರುಚಿಗೆ ತಕ್ಕಂತೆ ಗಿಟಾರ್ ನುಡಿಸಲು, ಚಿತ್ರ ಬಿಡಿಸಲು ಅವಕಾಶ ನೀಡಬಹುದು. ಕೋಣೆಯನ್ನು ನೀಟಾಗಿರುವುದು. ಕೋಣೆಯನ್ನು ಅಲಂಕರಿಸುವುದು. ಶಿಸ್ತು, ಸ್ವಚ್ಛತೆ ಇತ್ಯಾದಿಗಳನ್ನು ಹೇಳಿ ಕೊಡಬಹುದು. ಅವರಲ್ಲಿ ಅದು ತಮ್ಮ ಸ್ವಂತ ರೂಮ್ ಎಂಬ ಭಾವನೆ ಮೂಡುವಂತಾಗಲಿ.
http://thatskannada.oneindia.in

No comments:

Post a Comment