Saturday 20 August 2011

ಬಾಲ ಕಾರ್ಮಿಕರ ಉಳಿಸಲು ಇ ಪತ್ರಿಕೆ

ಬಾಲಕಾರ್ಮಿಕತೆ ನಿರ್ಮೂಲನೆಯೆಡೆಗೆ ಬಾ.ಕಾ.ಸಂ.ಕೇಂದ್ರವು ಬಾಲವಾಣಿ ಎಂಬ ಹೆಸರಿನ ಧ್ವೈಮಾಸಿಕ ವಿದ್ಯುನ್ಮಾನ ನಿಯತಕಾಲಿಕೆ (ಇ-ಜರ್ನಲ್) ಅನ್ನು ಪ್ರಕಟಿಸುತ್ತಿದೆ. ಮಕ್ಕಳ ಕಲ್ಯಾಣ ಹಾಗೂ ಇದಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಪ್ರಪಂಚಾದ್ಯಂತ ಆಗುತ್ತಿರುವ ಇತ್ತೀಚಿನ ಬೆಳವಣಿಗೆಗಳು ಹಾಗೂ ಅಭಿವೃದ್ಧಿಯನ್ನು ಬಿಂಬಿಸುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ.

ಸಮಾಜದ ಉನ್ನತ ವರ್ಗದ ಜನರನ್ನು ತಲುಪಿ ಇದರ ಬಗ್ಗೆ ಗಮನ ಸೆಳೆಯುವಲ್ಲಿ 'ಬಾಲವಾಣಿ' ಪ್ರಯತ್ನಿಸುತ್ತಿದೆ. 'ಬಾಲವಾಣಿ'ಯ ಪ್ರತಿ ಸಂಚಿಕೆಯೂ ವಿಭಿನ್ನ ವಿಷಯಗಳ ಬಗ್ಗೆ ನೋಟ ಬೀರಲಿದೆ. ಸರಕಾರದ ಹಲವು ಕಾರ್ಯಕ್ರಮಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಹಲವು ಯೋಜನೆಗಳು, ಸಾಧನೆಗಳನ್ನು ಎಲ್ಲರಿಗೆ ತಲುಪಿಸುವಲ್ಲಿ ಸಹಾಯ ಮಾಡುತ್ತದೆ. ಈ ಮೂಲಕ ವಾಚಕರಲ್ಲಿ ಮಕ್ಕಳ ಕಲ್ಯಾಣ ಹಾಗೂ ಬಾಲ ಕಾರ್ಮಿಕತೆ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ. ವಿವಿಧ ಸಂಸ್ಥೆಗಳು, ಕ್ರಿಯಾಶೀಲರು ಹಾಗೂ ಇತರರು ತಮ್ಮ ಚಿಂತನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಒಚಿದು ಉತ್ತಮ ವೇದಿಕೆಯಾಗಿದೆ.
ಈ ನಿಯತಕಾಲಿಕದಲ್ಲಿ ಸರಕಾರದ ಹಲವು ಕಾರ್ಯಕ್ರಮಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ನಾನಾ ಯೋಜನೆಗಳು, ಸಾಧನೆಗಳನ್ನು ಒಳಗೊಂಡಿದೆ. 'ಬಾಲವಾಣಿ'ಯ ಸಂಚಿಕೆ ನೋಡಲು ಸಂಪರ್ಕಿಸುವ ವೆಬ್‌ಸೈಟ್: www.karunadu.gov.in/karnatakachildlabour


ಸಂಪರ್ಕ ವಿಳಾಸ:
Karnataka State Resource Centre on Child Labour (KSRCCL)
Karnataka State Child Labour Eradication
Project Society
Department of Labour , Government of Karnataka
Karmika Bhavana, ITI Compound,
Bannerghatta Road , Bangalore - 560 029
Phone : 080-22453549, 080-26531258 Extn 152
E-Mail: ksrccl@yahoo.in

No comments:

Post a Comment