Thursday 18 August 2011

ಭಾರತದ ರಾಷ್ಟ್ರಪತಿಗಳು

 
ಭಾರತದ ಅಧ್ಯಕ್ಷರ ಮುದ್ರೆಗಳು
ಭಾರತದ ಅಧ್ಯಕ್ಷರು ಅಥವ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತ ಗಣರಾಜ್ಯದ ಪ್ರಥಮ ಪ್ರಜೆ, ಮತ್ತು ಭಾರತೀಯ ಸೈನ್ಯದ ದಂಡನಾಯಕರು.

ಭಾರತದ ಪ್ರಸಕ್ತ ಅಧ್ಯಕ್ಷರು ಪ್ರತಿಭಾ ಪಾಟೀಲ್.

ಚರಿತ್ರೆ

ಆಗಸ್ಟ್ ೧೯೪೭ರಲ್ಲಿ ಭಾರತ ಬ್ರಿಟಿಷ್ ಆಡಳಿತದಿಂದ ಸ್ವತಂತ್ರವಾಯಿತು. ಆಗ ಇನ್ನೂ ಅಧ್ಯಕ್ಷರ ಪದವಿ ಇರಲಿಲ್ಲ. ಭಾರತ ಸ್ವತಂತ್ರವಾಗಿದ್ದರೂ ಅಧಿಕೃತವಾಗಿ ಬ್ರಿಟಿಷ್ ಚಕ್ರವರ್ತಿಯ ಪ್ರತಿನಿಧಿಯಾಗಿ ಭಾರತದಿಂದ ನೇಮಿತರಾದ "ಗವರ್ನರ್ ಜನರಲ್" ಪದವಿಯಲ್ಲಿ ಒಬ್ಬರು ಇರಬೇಕಾಗಿದ್ದಿತು. ಸ್ವತಂತ್ರ ರಾಷ್ಟ್ರಕ್ಕೆ ಇದು ಒಪ್ಪುವ೦ಥದ್ದಲ್ಲವೆಂಬ ಅಭಿಪ್ರಾಯ ಅನೇಕರಲ್ಲಿ ಇತ್ತು. ಜನವರಿ ೧೯೪೯ರಲ್ಲಿ ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ ಅಧ್ಯಕ್ಷರು ಶ್ರೀ ಬಾಬು ರಾಜೇಂದ್ರ ಪ್ರಸಾದ್.

ಸಾ೦ವಿಧಾನಿಕ ಪಾತ್ರ

ಭಾರತೀಯ ಸಂವಿಧಾನದ ೫೨ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ಅಧ್ಯಕ್ಷರು:


ಭಾರತೀಯ ಪ್ರಜೆಯಾಗಿರಬೇಕು
ಭಾರತದಲ್ಲೇ ಜನಿಸಿದವರಾಗಬೇಕೆಂಬ ನಿಯಮವೇನಿಲ್ಲ
ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು


ಅಧಿಕೃತವಾಗಿ ಕಾರ್ಯಾಂಗದ ಮುಖ್ಯಸ್ಥರಾದರೂ, ಭಾರತದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಅಧಿಕಾರವುಳ್ಳ ಸ್ಥಾನ ಪ್ರಧಾನಮಂತ್ರಿಗಳದ್ದು (ಸಂವಿಧಾನದ ೭೪ ನೆಯ ಪರಿಚ್ಛೇದದಂತೆ). ಭಾರತದ ಸಂವಿಧಾನದ ೫೩ ನೆಯ ಪರಿಚ್ಛೇದದಂತೆ ಸಂಸತ್ತಿಗೆ ಅಧ್ಯಕ್ಷರ ಅಧಿಕಾರವನ್ನು ಬೇರೊಂದು ಪದವಿಯಲ್ಲಿರುವ ವ್ಯಕ್ತಿಗೆ ವರ್ಗಾಯಿಸುವ ಶಕ್ತಿಯುಂಟು.


ಸಾಂಪ್ರದಾಯಿಕವಾಗಿ ಅಧ್ಯಕ್ಷರ ಕೆಲಸಗಳಲ್ಲಿ ಒಂದು ಪ್ರಧಾನಮಂತ್ರಿ ಮತ್ತು ಇತರ ಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಡುವುದು.


ಅಧ್ಯಕ್ಷರನ್ನು ಚುನಾಯಿಸುವ ವ್ಯಕ್ತಿಗಳೆಂದರೆ:

ಸಂಸತ್ತಿನ ಎರಡೂ ಸಭೆಗಳ ಸದಸ್ಯರು
ಪ್ರತಿ ರಾಜ್ಯದ ವಿಧಾನಸಭೆಯ ಸದಸ್ಯರು


ಪ್ರತಿ ಸದಸ್ಯರ ಕೈಯಲ್ಲಿರುವ ಮತಗಳ ಸಂಖ್ಯೆ ಅವರ ರಾಜ್ಯದ ಜನಸಂಖ್ಯೆ, ಆ ರಾಜ್ಯದಿಂದ ಇರುವ ಶಾಸಕರ ಸಂಖ್ಯೆ, ಮೊದಲಾದವುಗಳ ಅನುಗುಣವಾಗಿರುತ್ತದೆ.


ಸಂವಿಧಾನದ ೬೧ ನೆಯ ಪರಿಚ್ಛೇದದ೦ತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನದಿ೦ದ ತೆಗೆಯುವ ಅಧಿಕಾರ ಸಂಸತ್ತಿಗುಂಟು.

ಅಧ್ಯಕ್ಷರ ಪಟ್ಟಿ

ಅನುಕ್ರಮ ಹೆಸರು ಅಧ್ಯಕ್ಷತೆ ಆರಂಭ ಅಧ್ಯಕ್ಷತೆ ಅಂತ್ಯ ಚಿತ್ರ
೦೧ ಡಾ. ರಾಜೇಂದ್ರ ಪ್ರಸಾದ್ ಜನವರಿ ೨೬, ೧೯೫೦ ಮೇ ೧೩, ೧೯೬೨ ಡಾ. ರಾಜೇಂದ್ರ ಪ್ರಸಾದ್
೦೨ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಮೇ ೧೩, ೧೯೬೨ ಮೇ ೧೩, ೧೯೬೭ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್
೦೩ ಡಾ. ಜಾಕಿರ್ ಹುಸೇನ್ ಮೇ ೧೩, ೧೯೬೭ ಮೇ ೩, ೧೯೬೯ ಡಾ. ಜಾಕಿರ್ ಹುಸೇನ್
* ವರಾಹಗಿರಿ ವೆಂಕಟ ಗಿರಿ ಮೇ ೩, ೧೯೬೯ ಜುಲೈ ೨೦, ೧೯೬೯ ವರಾಹಗಿರಿ ವೆಂಕಟ ಗಿರಿ
* ಮಹಮ್ಮದ್ ಹಿದಾಯತುಲ್ಲಾ ಜುಲೈ ೨೦, ೧೯೬೯ ಆಗಸ್ಟ್ ೨೪, ೧೯೬೯ ಮಹಮ್ಮದ್ ಹಿದಾಯತುಲ್ಲಾ
೦೪ ವರಾಹಗಿರಿ ವೆಂಕಟ ಗಿರಿ ಆಗಸ್ಟ್ ೨೪, ೧೯೬೯ ಆಗಸ್ಟ್ ೨೪, ೧೯೭೪ ವರಾಹಗಿರಿ ವೆಂಕಟ ಗಿರಿ
೦೫ ಫಕ್ರುದ್ದೀನ್ ಅಲಿ ಅಹ್ಮದ್ ಆಗಸ್ಟ್ ೨೪, ೧೯೭೪ ಫೆಬ್ರವರಿ ೧೧, ೧೯೭೭ ಫಕ್ರುದ್ದೀನ್ ಅಲಿ ಅಹ್ಮದ್
* ಬಿ ಡಿ ಜತ್ತಿ ಫೆಬ್ರವರಿ ೧೧, ೧೯೭೭ ಜುಲೈ ೨೫, ೧೯೭೭ ಬಿ ಡಿ ಜತ್ತಿ
೦೬ ನೀಲಂ ಸಂಜೀವ ರೆಡ್ಡಿ ಜುಲೈ ೨೫, ೧೯೭೭ ಜುಲೈ ೨೫, ೧೯೮೨ ನೀಲಂ ಸಂಜೀವ ರೆಡ್ಡಿ
೦೭ ಗ್ಯಾನಿ ಜೈಲ್ ಸಿಂಗ್ ಜುಲೈ ೨೫, ೧೯೮೨ ಜುಲೈ ೨೫, ೧೯೮೭ ಗ್ಯಾನಿ ಜೈಲ್ ಸಿಂಗ್
೦೮ ರಾಮಸ್ವಾಮಿ ವೆಂಕಟರಾಮನ್ ಜುಲೈ ೨೫, ೧೯೮೭ ಜುಲೈ ೨೫, ೧೯೯೨ ರಾಮಸ್ವಾಮಿ ವೆಂಕಟರಾಮನ್
೦೯ ಡಾ. ಶಂಕರ ದಯಾಳ ಶರ್ಮ ಜುಲೈ ೨೫, ೧೯೯೨ ಜುಲೈ ೨೫, ೧೯೯೭ ಡಾ. ಶಂಕರ ದಯಾಳ ಶರ್ಮ
೧೦ ಡಾ. ಕೆ ಆರ್ ನಾರಾಯಣನ್ ಜುಲೈ ೨೫, ೧೯೯೭ ಜುಲೈ ೨೫, ೨೦೦೨ ಡಾ. ಕೆ ಆರ್ ನಾರಾಯಣನ್
೧೧ ಡಾ. ಎ ಪಿ ಜೆ ಅಬ್ದುಲ್ ಕಲಮ್ ಜುಲೈ ೨೫, ೨೦೦೨ ಜುಲೈ ೨೫, ೨೦೦೭ ಡಾ. ಎ ಪಿ ಜೆ ಅಬ್ದುಲ್ ಕಲಮ್
೧೨ ಪ್ರತಿಭಾ ಪಾಟೀಲ್ ಜುಲೈ ೨೫, ೨೦೦೭ ಪ್ರಸಕ್ತ ಪ್ರತಿಭಾ ಪಾಟೀಲ್
* ಹಂಗಾಮಿ

No comments:

Post a Comment